ರಾಜ್ಯದಲ್ಲಿ 20,505 ಕೊರೊನಾ ಪಾಸಿಟಿವ್ ಪ್ರಕರಣ: 81 ಮಂದಿ ಸಾವು

1 min read

ಬೆಂಗಳೂರು,ಫೆ.2-ಕರ್ನಾಟಕ ರಾಜ್ಯದಲ್ಲಿಂದು 20,505 ಕೊರೊನಾ ವೈರಸ್ ಪ್ರಕರಣಗಳು ವರದಿಯಾಗಿವೆ.
ಆ ಮೂಲಕ ರಾಜ್ಯದಲ್ಲಿ ಕೊರೊನಾ ಸೋಂಕಿನ ಪ್ರಕರಣ 38,44,338ಕ್ಕೆ ಏರಿಕೆಯಾಗಿದೆ.
ಇಂದು 40,903 ಮಂದಿ ಗುಣಮುಖರಾಗಿ ಡಿಸ್ಚಾರ್ಜ್ ಆಗಿದ್ದು, ಇದುವರೆಗೂ ಒಟ್ಟು 36,27,925 ಗುಣಮುಖರಾಗಿದ್ದಾರೆ. ರಾಜ್ಯದಲ್ಲಿ 1,77,244 ಸಕ್ರಿಯ ಪ್ರಕರಣಗಳಿವೆ.
ಚಿಕಿತ್ಸೆ ಫಲಿಸದೇ ಇಂದು 81 ಮಂದಿ ಸಾವನ್ನಪ್ಪಿದ್ದು, ಸಾವಿನ ಸಂಖ್ಯೆ 39,137 ಕ್ಕೆ ಏರಿಕೆಯಾಗಿದೆ.
ಜಿಲ್ಲಾವಾರು ಪ್ರಕರಣಗಳು: ಬಾಗಲಕೋಟೆಯಲ್ಲಿ 303, ಬಳ್ಳಾರಿಯಲ್ಲಿ 390, ಬೆಳಗಾವಿಯಲ್ಲಿ 1,060, ಬೆಂಗಳೂರು ಗ್ರಾಮಾಂತರದಲ್ಲಿ 195, ಬೆಂಗಳೂರು ನಗರದಲ್ಲಿ 8,850, ಬೀದರ್ ನಲ್ಲಿ 190,‌ ಚಾಮರಾಜನಗರದಲ್ಲಿ 364, ಚಿಕ್ಕಬಳ್ಳಾಪುರದಲ್ಲಿ 311,
ಚಿಕ್ಕಮಗಳೂರಿನಲ್ಲಿ 89, ಚಿತ್ರದುರ್ಗದಲ್ಲಿ 208, ದಕ್ಷಿಣಕನ್ನಡದಲ್ಲಿ 412, ದಾವಣಗೆರೆಯಲ್ಲಿ 160, ಧಾರವಾಡದಲ್ಲಿ 633, ಗದಗದಲ್ಲಿ 131, ಹಾಸನದಲ್ಲಿ 590, ಹಾವೇರಿಯಲ್ಲಿ 411, ಕಲಬುರಗಿಯಲ್ಲಿ 337, ಕೊಡಗಿನಲ್ಲಿ 543, ಕೋಲಾರದಲ್ಲಿ 300, ಕೊಪ್ಪಳದಲ್ಲಿ 220 ಮಂಡ್ಯದಲ್ಲಿ 579, ಮೈಸೂರಿನಲ್ಲಿ 1,209, ರಾಯಚೂರಿನಲ್ಲಿ 165,
ರಾಮನಗರದಲ್ಲಿ 79, ಶಿವಮೊಗ್ಗದಲ್ಲಿ 715, ತುಮಕೂರಿನಲ್ಲಿ 762, ಉಡುಪಿಯಲ್ಲಿ 542, ಉತ್ತರಕನ್ನಡದಲ್ಲಿ 595, ವಿಜಯಪುರದಲ್ಲಿ 92, ಯಾದಗಿರಿಯಲ್ಲಿ 70 ಪಾಸಿಟಿವ್ ಪ್ರಕರಣಗಳು ವರದಿಯಾಗಿವೆ.

About Author

Leave a Reply

Your email address will not be published. Required fields are marked *