ಮೈಸೂರಿನಲ್ಲಿಂದು 66 ಕೊರೊನಾ ಪ್ರಕರಣಗಳು ವರದಿ
1 min read
ಮೈಸೂರು,ಫೆ.15- ಇಂದು ಮೈಸೂರು ಜಿಲ್ಲೆಯಲ್ಲಿ 66 ಹೊಸ ಪ್ರಕರಣಗಳು ದಾಖಲಾಗಿದ್ದು, ಇಬ್ಬರು ಸೋಂಕಿತರು ಸಾವನ್ನಪ್ಪಿದ್ದಾರೆ.
ಇದರಿಂದ ಜಿಲ್ಲೆಯಲ್ಲಿ ಕೊರೊನಾ ಸೋಂಕಿನ ಒಟ್ಟು ಪ್ರಕರಣ 2,28,727 ಕ್ಕೆ ಏರಿಕೆಯಾಗಿದ್ದು, ಒಟ್ಟು 2,552 ಮಂದಿ ಸೋಂಕಿತರು ಸಾವನ್ನಪ್ಪಿದ್ದಾರೆ.
ಇಂದು 261 ಮಂದಿ ಸೋಂಕಿನಿಂದ ಗುಣಮುಖರಾಗಿ ಡಿಸ್ಚಾರ್ಜ್ ಆಗಿದ್ದಾರೆ. ಇದರಿಂದ ಒಟ್ಟು ಗುಣಮುಖರಾದವರ ಸಂಖ್ಯೆ 2,25,212 ಕ್ಕೆ ಏರಿದೆ. 963 ಸಕ್ರೀಯ ಪ್ರಕರಣಗಳಿವೆ. ಇನ್ನು ಇಂದು 2,020 ಕೊರೊನಾ ಪರೀಕ್ಷೆ ನಡೆಸಲಾಗಿದೆ.
ಮಕ್ಕಳ ಕೊರೊನಾ ಪಾಸಿಟಿವ್ ಮಾಹಿತಿ:
0 ರಿಂದ 05 ವರ್ಷ- 1, 06 ರಿಂದ 10 ವರ್ಷ-2, 11 ರಿಂದ 17 ವರ್ಷ – 8 ಒಟ್ಟು 11 ಪ್ರಕರಣಗಳು ವರದಿಯಾಗಿವೆ.
ಗ್ರಾಮೀಣ ಪ್ರದೇಶದ ಸೋಂಕಿನ ಪ್ರಕರಣದ ವರದಿ:
ಹೆಚ್.ಡಿ.ಕೋಟೆ ಶೂನ್ಯ, ಹುಣಸೂರು 1, ಕೆ.ಆರ್.ನಗರ 4, ಮೈಸೂರು ನಗರ 50, ಮೈಸೂರು ತಾಲ್ಲೂಕು 4, ನಂಜನಗೂಡು 2, ತಿ. ನರಸೀಪುರ 5, ಪಿರಿಯಾಪಟ್ಟಣ, ಸರಗೂರು ಹಾಗೂ ಸಾಲಿಗ್ರಾಮ ಶೂನ್ಯ ಪ್ರಕರಣಗಳು ದಾಖಲಾಗಿವೆ.