ಸಿಹಿ ಹಂಚಿ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಹುಟ್ಟುಹಬ್ಬ ಆಚರಿಸಿದ ಅಭಿಮಾನಿಗಳು

1 min read

ಮೈಸೂರು: ಮಯೂರ ಕನ್ನಡ ಯುವಕರ ಬಳಗದ ವತಿಯಿಂದ ಚಾಮರಾಜ ಜೋಡಿ ರಸ್ತೆಯಲ್ಲಿ ವರನಟ ಡಾಕ್ಟರ್ ರಾಜಕುಮಾರ್ ಪ್ರತಿಮೆ ಮುಂಭಾಗ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ರವರ ಹುಟ್ಟುಹಬ್ಬ ಅಂಗವಾಗಿ ಸಾರ್ವಜನಿಕರಿಗೆ ಸಿಹಿ ವಿತರಿಸಲಾಯತು

 

 

ನಂತರ ಮಾತನಾಡಿದ ಮಯೂರ ಕನ್ನಡ ಯುವಕರ ಬಳಗದ ಅಧ್ಯಕ್ಷ ಜಿ ರಾಘವೇಂದ್ರ

ತಮ್ಮ ಕಲಾ ಸೇವೆ ನಿರಂತರವಾಗಿರಲಿ,ನಟನಾ ಕೌಶಲದಿಂದ ಮಾತ್ರವಲ್ಲ ತಮ್ಮ ವಿನಯಶೀಲ ನಡೆ-ನುಡಿಗಳಿಂದಲೂ ಕೋಟ್ಯಂತರ ಜನರ ಪ್ರೀತಿ-ಅಭಿಮಾನಗಳಿಗೆ ಪಾತ್ರರಾಗಿರುವ ಶಿವರಾಜ್ ಕುಮಾರ್ ಅವರಿಗೆ ಆಯುಷ್ಯ ಮತ್ತು ಆರೋಗ್ಯದ ಭಾಗ್ಯ ಕೂಡಿ ಬರಲಿ ಎಂದು ಹಾರೈಸುತ್ತೇನೆ ಎಂದಿದ್ದಾರೆ.

ಮಯೂರ ಕನ್ನಡ ಯುವಕರ ಅಧ್ಯಕ್ಷರಾದ ಜಿ ರಾಘವೇಂದ್ರ, ಕೆಪಿಸಿಸಿ ಸದಸ್ಯರಾದ ನಜರ್ಬಾದ್ ನಟರಾಜ್, ಕಿಶೋರ್ ಕುಮಾರ್, ಎಸ್ ಎನ್ ರಾಜೇಶ್, ಮೋಹನ್, ಮಂಜುನಾಥ್, ರವಿಚಂದ್ರ, ಸುಚಿಂದ್ರ, ಚಕ್ರಪಾಣಿ, ಹರೀಶ್ ನಾಯ್ಡು, ಕಿರಣ್ ಹಾಗೂ ಇನ್ನಿತರರು ಹಾಜರಿದ್ದರು

 

About Author

Leave a Reply

Your email address will not be published. Required fields are marked *