ಡಿಕೆಶಿ ಪ್ರಮಾಣ ವಚನ: ಕನಕಪುರ ಕೆಂಕೇರಮ್ಮನವರ ದೇವಾಲಯದಲ್ಲಿ ವಿಶೇಷ ಪೂಜೆ
ಕನಕಪುರ: ಕನಕಪುರದ ಕೆಂಕೇರಮ್ಮನವರ ದೇವಾಲಯದಲ್ಲಿ ಡಿಕೆ ಶಿವಕುಮಾರ್ ಅವರು ಇಂದು ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸುತ್ತಿರುವ ಹಿನ್ನಲೆಯಲ್ಲಿ ಶುಭ ಸಮಾರಂಭಕ್ಕೆ ಹಾರೈಸಲು ಅವರ ಹೆಸರಿನಲ್ಲಿ ಅವರ ಮನೆದೇವತೆಯಾದ ಶ್ರೀ ಕೆಂಕೆರಮ್ಮನವರ ದೇವಾಲಯದಲ್ಲಿ ವಿಶೇಷ ಪೂಜೆ ಹಾಗೂ ಪ್ರಸಾದ ವಿನಯೋಗವನ್ನು ಏರ್ಪಡಿಸಿದರು.
ಈ ಕಾರ್ಯಕ್ರಮದಲ್ಲಿ ಶ್ರೀ ಕೆಂಕೆರಮ್ಮ ಬಾಂಧವ್ಯ ಗೆಳೆಯರ ಬಳಗ ಹಾಗೂ ಶ್ರೀ ಕೆಂಕೆರಮ್ಮ ಸೇವಾ ಟ್ರಸ್ಟ್ ಸಂಘದ ಸರ್ವ ಸದಸ್ಯರು ಭಾಗಿಯಾಗಿದ್ದರು.