ಬಂಡೀಪುರ, ನಾಗರಹೊಳೆಯಲ್ಲಿ ಸಫಾರಿ ಪುನರಾರಂಭಿಸಲು ಬಿ.ಎಸ್. ಪ್ರಶಾಂತ್ ಮನವಿ
1 min read
ಮೈಸೂರು: ಬಂಡೀಪುರ ಹಾಗೂ ನಾಗರಹೊಳೆಯಲ್ಲಿ ಸಫಾರಿ ಪುನರಾರಂಭ ಮಾಡುವಂತೆ ಮೈಸೂರು ಟ್ರಾವೆಲ್ಸ್ ಅಸೋಸಿಯೇಷನ್‌ನ ಅಧ್ಯಕ್ಷರಾದ ಬಿ.ಎಸ್. ಪ್ರಶಾಂತ್ ಅವರು ಮನವಿ ಮಾಡಿದ್ದಾರೆ. ಈ ನಿಟ್ಟಿನಲ್ಲಿ ಅರಣ್ಯ ಸಚಿವರು, ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಜಿಲ್ಲಾಧಿಕಾರಿಗಳಿಗೆ ಪತ್ರ ಬರೆದಿದಾರೆ.
ದಕ್ಷಿಣ ಭಾರತದ ಪ್ರಮುಖ ಅರಣ್ಯ ಹಾಗೂ ಹುಲಿ ಸಂರಕ್ಷಿತ ಪ್ರದೇಶಗಳಾದ ಬಂಡೀಪುರ ಹಾಗೂ ನಾಗರಹೊಳೆ ಎಲ್ಲರಿಗೂ ಚಿರಪರಿಚಿತ. ಈಗಲೂ ದೇಶದಾದ್ಯಂತದಿಂದ ಹಾಗೂ ವಿದೇಶದಿಂದ ಜನರು ಈ ಅರಣ್ಯ ನೋಡಲೆಂದು ಹಾಗೂ ಸಫಾರಿ ಅನುಭವಿಸಲೆಂದು ಬರುತ್ತಾರೆ. ಆದರೆ ಈಗ ಇಲ್ಲಿ ಸಫಾರಿ ಸ್ಥಗಿತಗೊಂಡಿರುವ ಕಾರಣ ಸಾಕಷ್ಟು ಸಮಸ್ಯೆಗಳಾಗಿವೆ.
Letter to District In-Charge Minister
ಮೈಸೂರಿಗೆ ಬರುವ ಪ್ರವಾಸಿಗರು ಮುಖ್ಯವಾಗಿ ಭೇಟಿ ನೀಡುವ ಜಾಗ ಬಂಡೀಪುರ ಹಾಗೂ ನಾಗರಹೊಳೆ. ಮೈಸೂರಿಗೆ ಬರುವ ಬಹುತೇಕ ಎಲ್ಲ ಪ್ರವಾಸಿಗರೂ ಇಲ್ಲಿಗೆ ಭೇಟಿ ಕೊಟ್ಟೇ ಕೊಡುತ್ತಾರೆ. ಇದರಿಂದಾಗಿ ನಮ್ಮ ನಾಡಿನ ಭವ್ಯ ಅರಣ್ಯ ಸಂಪತ್ತಿನ ಪರಿಚಯ ಜನರಿಗೆ ಆಗುವ ಜೊತೆಗೆ ನಮ್ಮ ಆರ್ಥಿಕತೆಯೂ ಪ್ರವಾಸೋದ್ಯಮದ ಮೂಲಕ ಉತ್ತಮಗೊಳ್ಳುತ್ತದೆ. ಸಫಾರಿಗೆಂದು ಕೆಲಸ ಮಾಡುವ ಸಾವಿರಾರು ಜನರ ಕುಟುಂಬಗಳು ಇದರ ಮೇಲೆ ಅವಂಬಿತವಾಗಿವೆ. ಸಫಾರಿ ಇಲ್ಲದಿದ್ದರೆ ಅವರೆಲ್ಲರ ಕುಟುಂಬಗಳಿಗೂ ಬೇರೆ ದಿಕ್ಕು ಇಲ್ಲದಂತಾಗುತ್ತದೆ. ಈ ಭಾಗದಲ್ಲಿರುವ ಎಲ್ಲ ಹೋಟೆಲ್‌ಗಳು ಈ ಪ್ರವಾಸಿ ಆಕರ್ಷಣೆ ಇದೆ ಎಂಬ ಆಧಾರದ ಮೇಲೆ ಸಾವಿರಾರು ಕೋಟಿ ರೂಪಾಯಿಗಳನ್ನು ಹೂಡಿಕೆ ಮಾಡಿವೆ. ಇನ್ನು ಕೆಲವು ಹೋಟೆಲ್ ಮಾಲೀಕರು ಇಲ್ಲಿನ ಪ್ರವಾಸೋದ್ಯಮವನ್ನೇ ನಂಬಿ ಬ್ಯಾಂಕ್‌ಗಳಲ್ಲಿ ಕೋಟ್ಯಂತರ ರೂಪಾಯಿಗಳ ಲೋನ್ ಪಡೆದದು ರೆಸಾರ್ಟ್‌ಗಳನ್ನು ನಡೆಸುತ್ತಿದ್ದಾರೆ. ಈಗಾಗಲೇ ಬುಕ್ ಆಗಿದ್ದ ರೂಂಗಳೂ ಕ್ಯಾನ್ಸಲ್ ಆಗುತ್ತಿದ್ದು, ಹೋಟೆಲ್ ಹಾಗೂ ರೆಸಾರ್ಟ್ ಮಾಲೀಕರು ಪರದಾಡುವಂತಾಗಿದೆ. ಈ ಹೋಟೆಲ್‌ಗಳಿಗೆ, ರೆಸಾರ್ಟ್‌ಗಳಿಗೆ ಜನರನ್ನು ಕರೆದುಕೊಂಡು ಬರುವ ಟ್ರಾವಲ್ ಏಜೆಂಟ್‌ಗಳು ಹಾಗೂ ವಾಹನ ಚಾಲಕರಿಗೂ ದೊಡ್ಡ ಹೊಡೆತ ಬಿದ್ದಂತಾಗಿದೆ. ಇದಕ್ಕೆ ಪೂರಕವಾಗಿ ಪ್ರವಾಸಿ ಗೈಡ್‌ಗಳಿಗೂ ಸಮಸ್ಯೆಯಾಗಿದೆ.
ಟ್ರಾವಲ್ ಏಜೆಂಟ್‌ಗಳು, ಪ್ರವಾಸಿ ವಾಹನ ಚಾಲಕರು, ಹೋಟೆಲ್ ಮಾಲೀಕರು, ಪ್ರವಾಸಿ ಗೈಡ್‌ಗಳೆಲ್ಲರೂ ನಿಯಮದ ಪ್ರಕಾರ ಅಗತ್ಯವಿರುವ ಮಾನ್ಯತೆಗಳನ್ನೆಲ್ಲಾ ಪಡೆದು ತಮ್ಮ ಉದ್ಯಮ ನಡೆಸಿದರೂ ಈಗ ಸಫಾರಿ ಸ್ಥಗಿತಗೊಂಡಿರುವ ಕಾರಣ ಎಲ್ಲರ ಮೇಲೂ ಆರ್ಥಿಕ ಹೊಡೆತ ಬೀಳುತ್ತಿದೆ. ಈವರೆಗೂ ಎಲ್ಲ ಮುನ್ನೆಚ್ಚರಿಕೆ ಕ್ರಮಗಳೊಂದಿಗೆ ಸಫಾರಿ ನಡೆಸಲಾಗುತ್ತಿದ್ದು, ಯಾವುದೇ ದುರ್ಘಟನೆಗಳೂ ಸಫಾರಿ ಸಮಯದಲ್ಲಿ ನಡೆದಿಲ್ಲ. ನಾವೂ ಕೂಡ ರೈತರ ಮಕ್ಕಳು. ನಾವು ಇಂದಿಗೂ, ಎಂದೆಂದಿಗೂ ರೈತರ ಪರವಾಗಿ ಇದ್ದೇವೆ. ಆದ್ದರಿಂದ ಸರ್ಕಾರ ರೈತರಿಗೆ ಅನುಕೂಲವಾಗುವಂತೆ ಬೇಕಿದ್ದರೆ ಹೊಸ ಎಸ್‌ಒಪಿ ರಚನೆ ಮಾಡಿ ಅದರ ಪ್ರಕಾರ ಸಫಾರಿ ಮುಂದುವರೆಸುವ ಕೆಲಸ ಆಗಲಿ ಎಂದು ಪ್ರಶಾಂತ್ ಅವರು ಮನವಿ ಮಾಡಿದ್ದಾರೆ.