ಕುರಿ, ಮೇಕೆ ಕಳ್ಳನ ಬಂಧನ
1 min read
ನಂಜನಗೂಡು,ಫೆ.2-ಜನರ ನಿದ್ದೆಗೆಡಿಸಿದ ಕುರಿ, ಮೇಕೆ ಕಳ್ಳನನ್ನು ದೊಡ್ಡ ಕವಲಂದೆ ಪೊಲೀಸರು ಬಂಧಿಸಿದ್ದಾರೆ.
ತಿ.ನರಸೀಪುರ ತಾಲ್ಲೂಕಿನ ಬಾಗಲಿ ಗ್ರಾಮದ ಕುಮಾರ್ ಬಂಧಿತ ಆರೋಪಿ.
ಕೊಟ್ಟಿಗೆಯಲ್ಲಿ ಕಟ್ಟಿ ಹಾಕಿದ್ದ ಕುರಿ-ಮೇಕೆಗಳನ್ನು ರಾತ್ರಿ ವೇಳೆ ನಾಪತ್ತೆ ಮಾಡುತ್ತಿದ್ದ. ಈತನನ್ನು ಬಂಧಿಸಿರುವ ಪೊಲೀಸರು ಕಳ್ಳತನಕ್ಕೆ ಬಳಸಲಾದ ಆಪೆ ಆಟೊ ಮತ್ತು ಕಳವು ಮಾಡಿದ ಕುರಿ-ಮೇಕೆಗಳನ್ನು ವಶಪಡಿಸಿಕೊಂಡಿದ್ದಾರೆ.
ತಗಡೂರು ಮತ್ತು ಕಾರ್ಯ ಗ್ರಾಮದಲ್ಲಿ ಮೇಕೆ ಮತ್ತು ಕುರಿಗಳ ಇತ್ತೀಚೆಗೆ ಕಳವು ಮಾಡಲಾಗಿತ್ತು. ಈ ಬಗ್ಗೆ ರೈತರು ದೊಡ್ಡಕವಲಂದೆ ಪೊಲೀಸ್ ಠಾಣೆಗೆ ದೂರು ನೀಡಿದ್ದರು.
ದೂರಿನ ಮೇರೆಗೆ ಕಾರ್ಯಾಚರಣೆ ನಡೆಸಿದ ಪೊಲೀಸರು ಪಿಎಸ್ ಐ ಮಹೇಂದ್ರ, ಸಿಬ್ಬಂದಿಗಳು ಚಾಲಾಕಿ ಕಳ್ಳನನ್ನು ಬಂಧಿಸಲು ಯಶಸ್ವಿಯಾಗಿದ್ದಾರೆ.
ಕಾರ್ಯಾಚರಣೆಯಲ್ಲಿ ಎಎಸ್ಐಗಳಾದ ಮಂಚಗಯ್ಯ, ಬಸವರಾಜು, ಸ್ವಾಮಿನಾಯಕ, ಚಂದ್ರು, ಸಿಬ್ಬಂದಿಗಳಾದ ಶಿವಕುಮಾರ್ ವಿಜಯಕುಮಾರ್, ಚಂದ್ರ, ಲಿಂಗದೇವರು, ಮುರಳಿಧರ್ ಮತ್ತು ಶಿವಕುಮಾರ್, ಪರಶಿವಮೂರ್ತಿ, ಗಣೇಶ್, ಲೋಕೇಶ್, ಪುನೀತ್ ,ಲಿಂಗರಾಜು, ಕೆಂಪರಾಜು ಭಾಗವಹಿಸಿದ್ದರು.