ಬಂದೇ ಬಿಡ್ತು ‘ಬೆಂಗಳೂರು ಬಾಯ್ಸ್’ ಫಸ್ಟ್ ಲುಕ್ ಟೀಸರ್: ಅಂತ, ರಣಧೀರ, ಓಂ ಸಿನಿಮಾ ನೆನಪಿಸಿದ ವಿ ಮೇಕರ್ಸ್

1 min read

ಸಿನಿಮಾ ಮಾಡೋದೇ ಒಂದು ಕಲೆ. ಟೀಸರ್, ಟ್ರೇಲರ್ ಹಾಡುಗಳ ಮೂಲಕ ಸಿನಿಮಾದ ತಾಕತ್ತು ಏನು ಅನ್ನೋದನ್ನು ಸಾಬೀತು ಮಾಡುವುದು ಒಂದು ಜಾಣ್ಮೆ. ಅಂತಹ ಕಲೆಯನ್ನು ಬೆಂಗಳೂರು ಬಾಯ್ಸ್ ಸಿನಿಮಾ ಮೂಲಕ ವಿ ಮೇಕರ್ಸ್ ಪ್ರೋವ್ ಮಾಡಿದ್ದಾರೆ.

ಸ್ಪೆಷಲ್ ಆಗಿದೆ ಬೆಂಗಳೂರು ಬಾಯ್ಸ್ ಟೀಸರ್:

ವಿ ಮೇಕರ್ಸ್ ಪ್ರಯತ್ನದಲ್ಲಿ ಮೂಡಿ ಬಂದಿರುವ ಬೆಂಗಳೂರು ಬಾಯ್ಸ್ ಸಿನಿಮಾದ ಫಸ್ಟ್ ಲುಕ್ ಟೀಸರ್ ರಿಲೀಸ್ ಆಗಿದೆ. 90ರ ದಶಕದ ಸೂಪರ್ ಹಿಟ್ ಸಿನಿಮಾಗಳದ ಅಂತ, ರಣಧೀರ, ಓಂ ಹಾಗೂ ಎ ಸಿನಿಮಾಗಳ ನಾಯಕರ ರೀತಿಯಲ್ಲಿ ಸಚಿನ್ ಚೆಲುವರಾಯ ಸ್ವಾಮಿ, ಅಭಿಷೇಕ್ ದಾಸ್, ರೋಹಿತ್ ಮಿಂಚಿದ್ದಾರೆ. ಇವರ ಜೊತೆ ವೈನಿಧಿ ಜಗದೀಶ್, ಸೋನಿ ಮುಖ್ಯಭೂಮಿಕೆಯಲ್ಲಿ ನಟಿಸಿದ್ದಾರೆ.

https://youtu.be/5mzlELOO6c0

ಬೆಂಗಳೂರು ಬಾಯ್ಸ್ ರೋಮ್ಯಾಂಟಿಕ್ ಕಾಮಿಡಿ ಎಂಟರ್ ಟೈನರ್ ಚಿತ್ರವಾಗಿದ್ದು, ಕಾಲೇಜು ಕಥೆ, ಲವ್ ಸ್ಟೋರಿ, ಎಮೋಷನ್-ಸೆಂಟಿಮೆಂಟ್ ಮಿಶ್ರಣದ ಹೂರಣವಾಗಿದ್ದು, ರ್ಯಾಪರ್ ಅಲೋಕ್ ಸಂಗೀತ ನಿರ್ದೇಶನ, ಧರ್ಮ ವಿಷ್ ಸಂಗೀತ ಸಂಯೋಜನೆ ಸಿನಿಮಾಕ್ಕಿದೆ. ವಿಕ್ರಮ್ ಕೆ ವೈ ಸಿನಿಮಾದ ಸಿನಿಮಾಗೆ ಬಂಡವಾಳ ಹೂಡಿದ್ದು, ಪ್ರಶಾಂತ್ ರಾವ್ ಪುರಂ ಸಹ ನಿರ್ಮಾಣದ ಜವಾಬ್ದಾರಿ ಹೊತ್ತಿದ್ದು, ಅಂಬಿ ನಿಂಗೆ ವಯಸ್ಸಾಯ್ತೋ ಖ್ಯಾತಿಯ ಗುರುದತ್ ಗಾಣಿಗ ಕ್ರಿಯೇಟಿವ್ ಡೈರೆಕ್ಟರ್ ಆಗಿ ಬೆಂಗಳೂರು ಬಾಯ್ಸ್ ಸಿನಿಮಾದಲ್ಲಿ ಕೆಲಸ ಮಾಡಿದ್ದಾರೆ. ಈಗಾಗಲೇ ಶೂಟಿಂಗ್ ಕಂಪ್ಲೀಟ್ ಮಾಡಿರುವ ಚಿತ್ರತಂಡ ಫಸ್ಟ್ ಲುಕ್ ಟೀಸರ್ ರಿಲೀಸ್ ಮಾಡುವ ಮೂಲಕ ಪ್ರಮೋಷನ್ ಗೆ ಮುನ್ನುಡಿ ಬರೆದಿದೆ.

About Author

Leave a Reply

Your email address will not be published. Required fields are marked *