ಮೈಸೂರು ಅರಮನೆಗೆ ಭೇಟಿ ಕೊಟ್ಟಿದ್ದ ಬಿಪಿನ್ ರಾವತ್ ಹಾಗೂ ಪತ್ನಿ!
1 min read
ರಕ್ಷಣಾ ಪಡೆಯ ಮುಖ್ಯಸ್ಥರಾಗಿದ್ದ ಬಿಪಿನ್ ರಾವತ್ ಅವರಿಗು ಮೈಸೂರಿಗು ಅವಿನಾಭಾವ ಸಂಬಂಧವಿದೆ. ಮೈಸೂರಿಗೆ ಭೇಟಿ ಕೊಟ್ಟಿದ್ದ ಬಿಪಿನ್ ರಾವತ್ ಸರ್ ಅವರು ವಿಶ್ವವಿಖ್ಯಾತ ಅರಮನೆಗೆ ಕುಟುಂಬ ಸಮೇತ ಭೇಟಿ ಕೊಟ್ಟಿದ್ದರು. ಅರಮನೆ ಕಂಡು ಪುಳಿಕಿತರಾಗಿದ್ದ ಅವರು ಮೈಸೂರು ಹಾಗೂ ಅರಮನೆಗ ಬಗ್ಗೆ ಖುಷಿ ವ್ಯಕ್ತಪಡಿಸಿದರು.

ಮೈಸೂರು ಅರಮನೆಗೆ ಐದು ವರ್ಷಗಳ ಹಿಂದೆಯೇ ಭೇಟಿ ನೀಡಿದ್ದ ಬಿಪಿನ್ ರಾವತ್ ಅವರು ಪತ್ನ ಸಮೇತ ಅರಮನೆ ನೋಡಿ ಖುಷಿಪಟ್ಟು ಅರಮನೆ ಸಿಬ್ಬಂದಿ ಜೊತೆ ಪೋಟೋ ತೆಗಿಸಿಕೊಂಡಿದ್ದರು.
ಆ ಹಳೆಯ ನೆನಪನ್ನ ಇವತ್ತು ಅರಮನೆಯ ಉಪ ನಿರ್ದೇಶಕರು ಮೆಲಕು ಹಾಕುತ್ತ ಭಾವುಕರಾದರು.