ದಸರಾ ಸಾಂಸ್ಕೃತಿಕ ಕಾರ್ಯಕ್ರಮಗಳ ವೇಳಾಪಟ್ಟಿ
1 min read
ಮೈಸೂರು,ಅ.1-ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವಕ್ಕೆ ಸಾಂಸ್ಕೃತಿಕ ಕಾರ್ಯಕ್ರಮಗಳ ಪಟ್ಟಿ ಸಿದ್ಧಗೊಂಡಿದೆ.
ಅ.7ರಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಉದ್ಘಾಟಿಸಲಿದ್ದು, ರಾಜ್ಯ ಸಂಗೀತ ವಿದ್ವಾನ್ ಪ್ರಶಸ್ತಿ ಪ್ರದಾನ ಸಮಾರಂಭವೂ ಅಂದೇ ನಡೆಯಲಿದೆ.
ಅರಮನೆ ಮುಂಭಾಗದಲ್ಲಿ ಅ.7 ರಿಂದ 13 ರವರೆಗೆ 7 ದಿನಗಳ ಕಾಲ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿದೆ. ಅಲ್ಲದೆ, ಈ ಬಾರಿ ಹೊಸದಾಗಿ ನಂಜನಗೂಡಿನ ದೇವಾಲಯದ ಆವರಣದಲ್ಲಿಯೂ ದಸರಾ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ. ಅದೇ ರೀತಿ ಕಲಾಮಂದಿರದಲ್ಲಿಯೂ ಒಂದು ದಿನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.
ಅರಮನೆ ಮುಂಭಾಗದಲ್ಲಿ ನಡೆಯಲಿರುವ ಕಾರ್ಯಕ್ರಮಗಳ ಪಟ್ಟಿ:
ಅ.7ರಂದು ಸಂಜೆ 7.30ಕ್ಕೆ ಬೆಂಗಳೂರು ಪ್ರಭಾತ್ ಕಲಾವಿದರಿಂದ ಕರ್ನಾಟಕ ವೈಭವ ನೃತ್ಯ ರೂಪಕ.
ಅ. 8ರಂದು ಜನಪದ ಕಾವ್ಯ ಗಾಯನ, ವಯೊಲಿನ್ ಕನ್ನಡ ಡಿಂಡಿಮ ಕಾರ್ಯಕ್ರಮ ಶಿವಮೊಗ್ಗ ಹಾಗೂ ಮಳವಳ್ಳಿ ಕಲಾವಿದರಿಗೆ ಅವಕಾಶ.
ಅ. 9ರಂದು ನಾದಬ್ರಹ್ಮ ಹಂಸಲೇಖರಿಂದ ದೇಶಿ ಸಂಸ್ಕೃತಿ ಹಬ್ಬ.
ಮೈಸೂರು ಕಲಾವಿದರಿಂದ ಸಂಗೀತ ದರ್ಬಾರ್.
ಅ. 10ರಂದು ಮಿಶ್ರವಾದ್ಯ ಗಾಯನ, ಗಜಲ್ ಹಾಗೂ ಮಧುರ ಮಧುರವೀ ಮಂಜುಳಗಾನ ಕಾರ್ಯಕ್ರಮ.
ಬೆಂಗಳೂರು, ಮೈಸೂರು ಹಾಗೂ ತೀರ್ಥಹಳ್ಳಿ ಕಲಾವಿದರಿಂದ ಕಾರ್ಯಕ್ರಮಗಳು ನಡೆಯಲಿದೆ.
ಅ.11ರಂದು ಪ್ರತಿಷ್ಠಿತ ಪೊಲೀಸ್ ಬ್ಯಾಂಡ್ ವಾದ್ಯ. ಬಾಗಲಕೋಟೆ ಹಾಗೂ ರಾಯಚೂರು ಕಲಾವಿದರಿಂದ ನೃತ್ಯ ರೂಪಕ ಹಾಗೂ ದಾಸವಾಣಿ.
ಅ.12ರಂದು ಅದಿತಿ ಪ್ರಹ್ಲಾದ್, ಪಂಡಿತ್ ಪ್ರವೀಣ್ ಗೋಡ್ಖಿಂಡಿ ಮತ್ತು ಷಡಜ್ ಗೋಡ್ಖಿಂಡಿಯಿಂದ ಕೊಳಲುವಾದನ ಜುಗಲ್ ಬಂದಿ. ಮುದ್ದುಮೋಹನ್ ತಂಡದಿಂದ ಹಿಂದೂಸ್ತಾನಿ ಸಂಗೀತ.
ಅ.13ರಂದು ಬಿ.ಜಯಶ್ರೀ ತಂಡದಿಂದ ರಂಗಗೀತೆಗಳು. ಶ್ರೀಧರ್ ಜೈನ್ ತಂಡದಿಂದ ನೃತ್ಯರೂಪಕ. ಪಂಡಿತ್ ಜಯತೀರ್ಥ ಮೇವುಂಡಿಯಿಂದ ಹಿಂದೂಸ್ತಾನಿ ಗಾಯನ ನಡೆಯಲಿದೆ.