ನಂಜನಗೂಡು ದೊಡ್ಡ ಜಾತ್ರೆ ನೋಡಲು ಬಂದಿದ್ದ ಭಕ್ತ ಹೃದಯಾಘಾತದಿಂದ ಸಾವು

ಮೈಸೂರು: ನಂಜನಗೂಡು ದೊಡ್ಡ ಜಾತ್ರೆ ನೋಡಲು ಬಂದಿದ್ದ ಭಕ್ತ ಹೃದಯಾಘಾತದಿಂದ ಸಾವನಪ್ಪಿದ ಘಟನೆ ನಡೆದಿದೆ. ದಕ್ಷಿಣ ಕಾಶಿ ಖ್ಯಾತಿಯ ನಂಜನಗೂಡು ಶ್ರೀಕಂಠೇಶ್ವರ ಸ್ವಾಮಿ ದೊಡ್ಡ ಜಾತ್ರೆ ಹಿನ್ನಲೆ ಜಾತ್ರೆಗೆ ಬಂದಿದ್ದ ನಂಜುಂಡಸ್ವಾಮಿ (58) ಎಂಬ ದುರ್ದೈವಿ ಮೃತಪಟ್ಟಿದ್ದಾರೆ.

ಬೆಂಗಳೂರು ಗ್ರಾಮಾಂತರದ ಮಾಗಡಿಯಿಂದ ಆಗಮಿಸಿದ್ದ ನಂಜುಂಡಸ್ವಾಮಿ ದೇವಸ್ಥಾನದ ಮುಂಭಾಗದಲ್ಲಿ ಕುಸಿದು ಬಿದ್ದಿದ್ದಾರೆ. ಆಸ್ಪತ್ರೆಗೆ ಸಾಗಿಸು ಮಾರ್ಗ ಮಧ್ಯೆ ನಂಜುಂಡಸ್ವಾಮಿ ಸಾವನ್ನಪ್ಪಿದ್ದಾರೆ. ನಂಜನಗೂಡು ನಂಜುಂಡೇಶ್ವರನ ಭಕ್ತರಾಗಿದ್ದ ನಂಜುಂಡಸ್ವಾಮಿ ಅವರು ಪ್ರತಿವರ್ಷವು ಜಾತ್ರೆಯನ್ನು ನೋಡಲು ಆಗಮಿಸುತ್ತಿದ್ದರು. ನಂಜುಂಡಸ್ವಾಮಿ ಅವರು ಅನಾರೋಗ್ಯ ಹಿನ್ನಲೆ ಡಯಾಲಿಸಿಸ್ ಗೆ ಒಳಗಾಗುತ್ತಿದ್ದರು ಎಂದು ಹೇಳಲಾಗಿದೆ. ಸದ್ಯ ನಂಜನಗೂಡು ಪಟ್ಟಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

About Author

Leave a Reply

Your email address will not be published. Required fields are marked *