40 ಕಂಪನಿಗಳ ಮಾತ್ರೆ ಹಿಂದಿಕ್ಕಿದ ಡೋಲೋ 650

1 min read

ಬೆಂಗಳೂರು,ಜ.18- ಡೋಲೋ 650 ಮಾತ್ರೆ 40 ಕಂಪನಿಗಳ ಮಾತ್ರೆ ಹಿಂದಿಕ್ಕಿ ದಾಖಲೆಯ ಪ್ರಮಾಣದಲ್ಲಿ ಮಾರಾಟವಾಗಿದೆ.
ಪ್ಯಾರಾಸಿಟಮೊಲ್ ವಿಭಾಗದಲ್ಲಿ ಈಗಾಗಲೇ 40ಕ್ಕೂ ಹೆಚ್ಚು ವಿವಿಧ ಕಂಪನಿಗಳ ಮಾತ್ರೆಗಳು ಲಭ್ಯವಿದೆ. ಅವೆಲ್ಲವನ್ನೂ ಡೋಲೋ 650 ಹಿಂದಿಕ್ಕಿದೆ.
ಬೆಂಗಳೂರು ಮೂಲದ ಮೈಕ್ರೋ ಲ್ಯಾಬ್ಸ್ ಲಿ. ಸಂಸ್ಥೆಯ ಡೋಲೋ 650 ಮಾತ್ರೆ 2020ರ ಜನವರಿಯಿಂದ ಈವರೆಗೂ ದಾಖಲೆಯ ಮಾರಾಟ ಕಂಡಿದ್ದು, ಬರೋಬ್ಬರಿ 560 ಕೋಟಿಗೂ ಹೆಚ್ಚಿನ ಆದಾಯ ಕಂಡಿದೆ.
ಕೊರೊನಾ ಆರಂಭಕ್ಕೂ ಮುನ್ನದಿಂದಲೇ ವಿವಿಧ ರೋಗ ಲಕ್ಷಣಗಳಿಗೆ ವೈದ್ಯರು ಡೋಲೋ 650 ಶಿಫಾರಸು ಮಾಡುತ್ತಿದ್ದರು. ಇದೀಗ ಕೊರೊನಾ ಕಾರಣದಿಂದ ಅತಿ ಹೆಚ್ಚು ಮಾತ್ರೆಗಳು ಅವಶ್ಯವಾಗಿವೆ ಎನ್ನಲಾಗಿದೆ.
ಡಿಸೆಂಬರ್ 2021ರಲ್ಲಿ 28.9 ಕೋಟಿ ರೂ. ಮೌಲ್ಯದ ಡೋಲೋ ಮಾತ್ರೆ ಮಾರಾಟವಾಗಿದೆ. ಜತೆಗೆ 2020 ಏಪ್ರಿಲ್, ಮೇನಲ್ಲಿ ಕೊರೊನಾ ಗರಿಷ್ಠ ಪ್ರಮಾಣದಲ್ಲಿದ್ದ ಕಾರಣ ಆ ವೇಳೆಯೂ ಹೆಚ್ಚಿನ ಲಾಭ ಕಂಡಿದೆ.

About Author

Leave a Reply

Your email address will not be published. Required fields are marked *