ಸಾಲಭಾದೆಯಿಂದ ರೈತ ಆತ್ಮಹತ್ಯೆ
1 min read
ಪಿರಿಯಾಪಟ್ಟಣ: ಸಾಲಭಾದೆಯಿಂದ ರೈತ ಆತ್ಮಹತ್ಯೆ ಮಾಡಿಕೊಂಡ ಘಟನೆ ಪಿರಿಯಾಪಟ್ಟಣ ತಾಲೂಕಿನ ಬಿಳಗುಂದ ಗ್ರಾಮದಲ್ಲಿ ಬುಧವಾರ ಜರುಗಿದೆ.
ಶ್ರೀನಿವಾಸ್ (47) ಸಾಲಭಾದೆಯಿಂದ ಆತ್ಮಹತ್ಯೆ ಮಾಡಿಕೊಂಡು ಮೃತಪಟ್ಟ ರೈತ, ತಮ್ಮ ತಾಯಿ ಹಾಗೂ ತಂದೆಯ ಹೆಸರಿನಲ್ಲಿದ್ದ ಜಮೀನುಗಳನ್ನು ಮೃತ ರೈತ ಶ್ರೀನಿವಾಸ್ ಹಾಗೂ ಅವರ ಸಹೋದರ ತಿಮ್ಮೇಗೌಡ ಸಮನಾಗಿ ಹಂಚಿಕೊಂಡು ಸದರಿ ಜಮೀನುಗಳಲ್ಲಿ ತಂಬಾಕು ಮತ್ತು ಶುಂಠಿ ಬೆಳೆ ಬೆಳೆಯುತ್ತಿದ್ದರು, ವ್ಯವಸಾಯದ ಉದ್ದೇಶದಿಂದ ಮೃತ ರೈತ ಶ್ರೀನಿವಾಸ್ ಖಾಸಗಿ ಫೈನಾನ್ಸ್ ಹಾಗೂ ಮಹಿಳಾ ಸ್ವಸಹಾಯ ಸಂಘ ಸೇರಿದಂತೆ ಕೈಸಾಲವಾಗಿ ಸುಮಾರು 10 ಲಕ್ಷ ಸಾಲ ಮಾದಿದ್ದರು, ಕಳೆದ ವರ್ಷದ ಅತಿಯಾದ ಮಳೆಯಿಂದ ಬೆಳೆ ಸರಿಯಾಗಿ ಬಾರದೆ ವ್ಯವಸಾಯದ ಉದ್ದೇಶದಿಂದ ಮಾಡಿದ ಸಾಲ ಹೇಗೆ ತೀರಿಸುವುದು ಎಂದು ಹಲವು ಬಾರಿ ಮನನೊಂದಿದ್ದರು ಇದೆ ಬೇಜಾರಿನಲ್ಲಿ ಬುಧವಾರ ಬೆಳಗ್ಗೆ ಜಮೀನಿನ ಬಳಿ ಯಾವುದೋ ಕ್ರಿಮಿನಾಶಕ ಸೇವಿಸಿ ಒದ್ದಾಡುತ್ತಿದ್ದನ್ನು ಸ್ಥಳೀಯರು ನೋಡಿ ಪಿರಿಯಾಪಟ್ಟಣ ಸರ್ಕಾರಿ ಆಸ್ಪತ್ರೆಗೆ ಚಿಕಿತ್ಸೆಗೆ ಕರೆದುಕೊಂಡು ಬಂದ ಸಂದರ್ಭ ವೈದ್ಯರು ಪರೀಕ್ಷಿಸಿ ಶ್ರೀನಿವಾಸ್ ಮೃತಪಟ್ಟಿರುವುದಾಗಿ ತಿಳಿಸಿದ್ದಾರೆ ಎಂದು ಮೃತರ ಪತ್ನಿ ಪ್ರತಿಮಾ ಬೆಟ್ಟದಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಘಟನಾ ಸ್ಥಳಕ್ಕೆ ಬೆಟ್ಟದಪುರ ಪೊಲೀಸರು ಧಾವಿಸಿ ದೂರು ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.
