ಮೊದಲ ದಿನದ ಎಕ್ಸಾಂ ಮುಕ್ತಾಯ- 634 ಮಂದಿ ಗೈರು!
1 min read
ಮೈಸೂರು ಜಿಲ್ಲೆಯಲ್ಲಿ ಮೊದಲ ದಿನದ ಎಸ್ ಎಸ್ ಎಲ್ ಸಿ ಪರೀಕ್ಷೆ ಮುಕ್ತಾಯವಾಗಿದ್ದು, ಮೊದಲ ದಿನ 634 ವಿದ್ಯಾರ್ಥಿಗಳು ಪರೀಕ್ಷೆಗೆ ಗೈರಾಗಿದ್ದಾರೆ. ಎಸ್ ಎಸ್ ಎಲ್ ಸಿ ಪರೀಕ್ಷೆ ಕಟ್ಟಿದ್ದ ಶಾಲಾ ವಿದ್ಯಾರ್ಥಿಗಳು 36,151 ಅದರಲ್ಲಿ 35,517 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದು, 634 ವಿದ್ಯಾರ್ಥಿಗಳು ಗೈರಾಗಿದ್ದಾರೆ.

ಪುನರಾವರ್ತಿತ ಹಾಗೂ ಖಾಸಗಿಯಾಗಿ ಪರೀಕ್ಷೆ ಕಟ್ಟಿದವರ ಮಾಹಿತಿ ಸದ್ಯ ಲಭ್ಯವಾಗಿಲ್ಲ. ಆದರೆ ಪರೀಕ್ಷೆಗೆ ಗೈರಾದವರ ಮಾಹಿತಿ ಕಲೆ ಹಾಕುತ್ತಿರುವ ಶಿಕ್ಷಣ ಇಲಾಖೆ ಯಾವ ಕಾರಣಕ್ಕೆ ಪರೀಕ್ಷೆಗೆ ಬಂದಿಲ್ಲ? ಹಿಜಾಬ್ ಅಥವಾ ಬೇರೆ ಕಾರಣ ಇದರ ಬಗ್ಗೆ ಮಾಹಿತಿ ಕಲೆ ಹಾಕುತ್ತಿದ್ದೇವೆಂದು ಡಿಡಿಪಿಐ ರಾಮಚಂದ್ರ ರಾಜೇ ಅರಸ್ ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ.