ಚಾಲಕನ ನಿಯಂತ್ರಣ ತಪ್ಪಿ ಹಳ್ಳಕ್ಕೆ ಉರುಳಿದ ಗೂಡ್ಸ್ ಟೆಂಪೋ

1 min read

ನಂಜನಗೂಡು,ಫೆ.15-ಚಾಲಕನ ನಿಯಂತ್ರಣ ತಪ್ಪಿದ ಗೂಡ್ಸ್ ಟೆಂಪೋವೊಂದು ಹಳ್ಳಕ್ಕೆ ಉರುಳಿ ಬಿದ್ದಿರುವ ಘಟನೆ ಇಂದು ನಂಜನಗೂಡಿನಲ್ಲಿ ನಡೆದಿದೆ.‌


ಬೆಂಗಳೂರಿನಿಂದ ಊಟಿಗೆ ಹಣ್ಣುಗಳನ್ನು ತುಂಬಿಕೊಂಡು ಹೋಗುತ್ತಿದ್ದ ವೇಳೆ ಪಟ್ಟಣದ ದೇವರಾಜ್ ಅರಸು ಸೇತುವೆ ಬಳಿಯ ಘಟನೆ ನಡೆದಿದೆ. ಅದೃಷ್ಟವಶಾತ್ ಟೆಂಪೋ ಚಾಲಕ ಸತೀಶ್ ಪ್ರಾಣಾಪಾಯದಿಂದ ಪಾರಾಗಿದ್ದಾನೆ.‌


ಆದರೆ‌ ಸಣ್ಣಪುಟ್ಟ ಗಾಯಾಗಳಾಗಿರುವ ಚಾಲಕನನ್ನು ನಂಜನಗೂಡು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗಿದೆ.


ಟೆಂಪೋ ಹಳ್ಳಕ್ಕೆ ಬಿದ್ದ ರಭಸಕ್ಕೆ ವಾಹನದ ಎಂಜಿನ್ ಮತ್ತು ಚಾರ್ಸಿ ಬೇರೆ ಬೇರೆಯಾಗಿ ನುಜ್ಜುಗುಜ್ಜಾಗಿದೆ. ಘಟನೆಗೆ ಬ್ರೇಕ್ ವೈಫಲ್ಯವೋ ಅಥವಾ ಚಾಲಕನ ಅಜಾಗರೂಕತೆಯೋ ತಿಳಿದಿಲ್ಲ.‌


ಈ ಬಗ್ಗೆ ನಂಜನಗೂಡು ಸಂಚಾರಿ ಪೊಲೀಸರು ಪ್ರಕರಣ ದಾಖಲಿಸಿ ಕೊಂಡಿದ್ದಾರೆ.

About Author

Leave a Reply

Your email address will not be published. Required fields are marked *