ಮೈಸೂರಿನ ಸರಗೂರಿನಲ್ಲಿ ಹುಲಿ ಸೆರೆ.!
1 min read
ಸರಗೂರು : ತಾಲೂಕಿನ ಮುಳ್ಳೂರು ಭಾಗದ ಬೆಣ್ಣೆಗೆರೆ ಕಾಲುವೆ ಬಳಿ ಸೋಮವಾರ ಡ್ರೋನ್ ಮೂಲಕ ಹುಲಿಯ ಚಲನವಲನವನ್ನು ಗಮನಿಸುತ್ತಿದ್ದಾಗ ಒಂದು ಹುಲಿ ಮೂರು ಮರಿಗಳೊಂದಿಗೆ ಕಾಣಿಸಿಕೊಂಡಿದೆ.

ಮುಂದುವರೆದು ತಾಯಿ ಹುಲಿಯೂ ಬೇಟೆ ಹುಡುಕಿಕೊಂಡು ಚಲಿಸುವಾಗ ಅದರ ಮೇಲೆ ಡ್ರೋನ್ ಕ್ಯಾಮರಾ ಮೂಲಕ ನಿಗಾವಹಿಸಿಲಾಗಿತ್ತು, ಹುಲಿಯು ಹೊಸಹೆಗ್ಗುಡಿಲು ಗ್ರಾಮದ ಜಮೀನು ಒಂದರಲ್ಲಿ ಹಂದಿ ಒಂದನ್ನು ಬೇಟೆ ಆಡಿರುತ್ತದೆ, ತಕ್ಷಣವೇ ಅರಣ್ಯ ಇಲಾಖೆ ಸಿಬ್ಬಂದಿಗಳು ಕಾರ್ಯ ಪ್ರವೃತರಾಗಿ ಭೀಮ, ಮಹೇಂದ್ರ,ಪ್ರಶಾಂತ, ಸುಗ್ರೀವ ಸಾಕಾನೆಗಳನ್ನು ಉಪಯೋಗಿಸಿಕೊಂಡು ಹುಲಿ ಸೆರೆ ಹಿಡಿಯುವ ಕಾರ್ಯಾಚರಣೆಯನ್ನು ಕೈಗೊಂಡು ಸ್ಥಳದಲ್ಲಿ ಹಾಜರಿದ್ದ ಇಲಾಖೆಯ ಪಶುವೈದ್ಯಾಧಿಕಾರಿ ಡಾ. ವಾಸಿಂ ರವರು ಅರವಳಿಕೆಯನ್ನು ಸಿದ್ಧಪಡಿಸಿಕೊಂಡು ಸಾಕಾನೆಯ ಮೇಲೆ ಕುಳಿತು ಡಾರ್ಟ್ ಮಾಡಲಾಯಿತು.

ನಂತರ ಸದರಿ ಹುಲಿಯನ್ನು ಪಶು ವೈದ್ಯಾಧಿಕಾರಿಯ ಮಾರ್ಗದರ್ಶನದಲ್ಲಿ ಚಿಕಿತ್ಸೆ ನೀಡಿ ಸುರಕ್ಷತೆ ದೃಷ್ಟಿಯಲ್ಲಿ ಬಂಡೀಪುರಕ್ಕೆ ಸ್ಥಳಾಂತರಿಸಲಾಗಿದೆ ನಂತರ ಅರಣ್ಯ ಇಲಾಖೆಯ ಸಿಬ್ಬಂದಿಗಳನ್ನು ಬಳಸಿಕೊಂಡು ಮುಳ್ಳೂರಿನ ಹಳ್ಳದ ಸುತ್ತಮುತ್ತಲ ಪ್ರದೇಶದಲ್ಲಿ ಮೂರು ಹುಲಿ ಮರಿಗಳನ್ನು ಪತ್ತೆ ಹಚ್ಚುವ ಕಾರ್ಯ ಪ್ರಗತಿಯಲ್ಲಿದೆ ಎಂದು ನುಗು ವಲಯ ಅರಣ್ಯ ಅಧಿಕಾರಿ ಅಮೃತ ರಾಜ್ ತಿಳಿಸಿರುತ್ತಾರೆ.
ಈ ಸಂದರ್ಭದಲ್ಲಿ ಸ್ಥಳದಲ್ಲಿ ಸಿ.ಎಫ್ ಪ್ರಭಾಕರ್, ಎಸಿಎಫ್ ಪರಮೇಶ್ ಡಿ, ನಗು ವಲಯದ ಅರಣ್ಯಾಧಿಕಾರಿ ಅಮೃತ ರಾಜ್, ಕಲ್ಕೆರೆ ವಲಯ ಅರಣ್ಯಾಧಿಕಾರಿ ರಾಜೇಶ್, ಎಸ್ ಟಿ ಪಿ ಎಫ್ ನ ವೈರಮುಡಿ,ಪಶು ವೈದ್ಯಾಧಿಕಾರಿ ಡಾ” ವಾಸಿಂ, ಡ್ರೋನ್ ಆಪರೇಟರ್ ರಾಜು ಹಾಗೂ 50 ಕ್ಕೂ ಹೆಚ್ಚು ಸಿಬ್ಬಂದಿ ವರ್ಗದವರು ಸ್ಥಳದಲ್ಲಿ ಹಾಜರಿದ್ದು ನಿಗಾ ವಹಿಸುತ್ತಿದ್ದಾರೆ.