ನೂರಾರು ಪುಟ್ಟ ಬೌದ್ಧ ಮಕ್ಕಳಿಂದ ನಮ್ಮ ರಾಷ್ಟ್ರ ಧ್ವಜ ಹಿಡಿದು ಗೌರವ ಸಮರ್ಪಣೆ!
1 min read
ಬೈಲಕುಪ್ಪೆ : ಪಿರಿಯಾಪಟ್ಟಣ ತಾಲೂಕಿನ ಬೈಲಕುಪ್ಪೆಯಲ್ಲಿ ವಿವಿಧಡೆ ಸ್ವಾತಂತ್ರ್ಯ ಆಚರಣೆ ಸಂಭ್ರಮದಿಂದ ಕಳೆಗಟ್ಟಿತು,
ಪ್ರವಾಸಿಗರ ನೆಚ್ಚಿನ ತಾಣ ಗೋಲ್ಡನ್ ಟೆಂಪಲ್ ಬೌದ್ಧ ಬಿಕ್ಷಗಳಿಂದ ನಡೆದ ಸ್ವಾತಂತ್ರ್ಯ ಆಚರಣೆಯನ್ನು ಹೆಚ್ಚು ಮಂದಿ ಪ್ರವಾಸಿಗರು ವೀಕ್ಷಣೆ ಮಾಡಿದ್ದು ಕಂಡುಬಂದಿದ್ದು, ಜೊತೆಗೆ ನೂರಾರು ಮಂದಿ ಪುಟ್ಟ ಬೌದ್ಧ ಭಿಕ್ಷುಗಳು ರಾಷ್ಟ್ರಧ್ವಜವನ್ನು ಕೈಯಲ್ಲಿ ಹಿಡಿದು ನಮ್ಮ ದೇಶ ನಮ್ಮ ಭಾರತ ಎಂದು ಘೋಷಣೆಯನ್ನು ಸಹ ಕೂಗಿದರು.

ಬೈಲಕುಪ್ಪೆಯ ಆರಕ್ಷಕ ಠಾಣೆಯಲ್ಲಿ ಸಬ್ ಇನ್ಸ್ಪೆಕ್ಟರ್, ಬಸವರಾಜು ಧ್ವಜಾರೋಹಣ ಮಾಡಿದರೆ, ಆಟೋ ಚಾಲಕರ ಸ್ಟ್ಯಾಂಡ್ ನಲ್ಲಿ ಅಪರಾಧ ವಿಭಾಗದ ಸಬ್ ಇನ್ಸ್ಪೆಕ್ಟರ್ ಧ್ವಜಾರೋಹಣ ನೆರವೇರಿಸಿದರು.

ಇತ್ತ ಟಿಬೆಟಿನ್ ಆಡಳಿತ ಸಂಸ್ಥೆಯಲ್ಲಿ ಇಂಡೋ ಟಿಬೇಟಿಯನ್ ಅಧ್ಯಕ್ಷ ಜವರೇಗೌಡ ಹಾಗೂ ಸದಸ್ಯ ನಟರಾಜು ಧ್ವಜಾರೋಹಣ ಮಾಡಿದರು.