ಅಪ್ಪು ಅಭಿನಯದ ‘ಜೇಮ್ಸ್’ ಸಿನಿಮಾದ ಟೀಸರ್ ರಿಲೀಸ್
1 min read
ಬೆಂಗಳೂರು,ಫೆ.11-ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅಭಿನಯದ ಕೊನೆಯ ಹಾಗೂ ಬಹುನಿರೀಕ್ಷಿತ ‘ಜೇಮ್ಸ್’ ಸಿನಿಮಾದ ಟೀಸರ್ ರಿಲೀಸ್ ಆಗಿದೆ.
ಟೀಸರ್ ಕಂಡು ಅಭಿಮಾನಿಗಳು ಫುಲ್ ಥ್ರಿಲ್ ಆಗಿದ್ದು, ಸಾಕಷ್ಟು ಮೆಚ್ಚುಗೆ ವ್ಯಕ್ತವಾಗಿದೆ. ಜೊತೆಗೆ ಪ್ರೀತಿಯ ಅಪ್ಪು ನಮ್ಮೊಂದಿಗೆ ಇಲ್ಲವಲ್ಲ ಎಂಬ ನೋವು ಎಲ್ಲರನ್ನು ಕಾಡುತ್ತಿದೆ.
ಟೀಸರ್ ನೋಡಿದ ಬಳಿಜ ಸಿನಿಮಾ ಮೇಲಿರುವ ನಿರೀಕ್ಷೆ ದುಪ್ಪಟ್ಟಾಗಿದೆ. ಟೀಸರ್ ನಲ್ಲಿ ಸಖತ್ ಆ್ಯಕ್ಷನ್ ದೃಶ್ಯಗಳಿದ್ದು, ಮೊದಲಿನಿಂದ ಕೊನೆವರೆಗೂ ಆ್ಯಕ್ಷನ್ ದೃಶ್ಯಗಳಿವೆ. ಗನ್ ಹಿಡಿದು ಅಪ್ಪು ಮತ್ತಷ್ಟು ಪವರ್ ಆಗಿ ಮಿಂಚಿದ್ದಾರೆ. ‘ನನಗೆ ಮೊದಲಿನಿಂದಲೂ ರೆಕಾರ್ಡ್ ಬ್ರೇಕ್ ಮಾಡಿ ಅಭ್ಯಾಸ’ ಎಂಬ ಪವರ್ ಫುಲ್ ಪಂಚಿಂಗ್ ಡೈಲಾಗ್ ಟೀಸರ್ ನಲ್ಲಿದೆ.
‘ಜೇಮ್ಸ್’ ಚಿತ್ರದ ಪವರ್ ಫುಲ್ ಟೀಸರ್ ಪಿಆರ್ ಕೆ ಯೂಟ್ಯೂಬ್ ಚಾನೆಲ್ ನಲ್ಲಿ ಮಾತ್ರವಲ್ಲ ಕರ್ನಾಟದಲ್ಲಿರುವ ಎಲ್ಲಾ ಚಿತ್ರಮಂದಿರಗಳು ಹಾಗೂ ಮಲ್ಟಿಪ್ಲೆಕ್ಸ್ ಗಳಲ್ಲಿ ಪ್ರದರ್ಶನವಾಗುತ್ತಿದೆ.
ಸಿನಿಮಾದಲ್ಲಿ ಪುನೀತ್ ಅವರು ಮೊಟ್ಟ ಮೊದಲ ಬಾರಿಗೆ ಯೋಧನ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಅಪ್ಪುಗೆ ನಟ ಶಿವರಾಜ್ ಕುಮಾರ್ ಧ್ವನಿ ನೀಡಿದ್ದಾರೆ. ಅಷ್ಟೇ ಅಲ್ಲದೆ, ಈ ಸಿನಿಮಾದಲ್ಲಿ ಶಿವರಾಜ್ ಕುಮಾರ್, ರಾಘವೇಂದ್ರ ರಾಜ್ ಕುಮಾರ್ ಅವರು ಅಭಿನಯಿಸಿದ್ದಾರೆ.
ಸಿನಿಮಾ ಅಪ್ಪು ಹುಟ್ಟುಹಬ್ಬದ ದಿನ ಮಾರ್ಚ್ 17 ರಂದು ಬಿಡುಗಡೆಗೊಳ್ಳಲು ಸಜ್ಜಾಗಿದೆ.