ನೆಚ್ಚಿನ ಗೆಳತಿಗೆ ಹ್ಯಾಪಿ ಬರ್ತಡೇ ಮೈ ಲವ್ ಎಂದು ಶುಭ ಕೋರಿದ ಕ್ರಿಕೆಟಿಗ ಕೆ.ಎಲ್.ರಾಹುಲ್!
1 min read
ಭಾರತದ ಸ್ಟಾರ್ ಕ್ರಿಕೆಟ್ ಆಟಗಾರ ಕೆ.ಎಲ್. ರಾಹುಲ್‌ಗೆ ಶುಕ್ರವಾರ ಡಬಲ್ ಧಮಾಕ ಸಿಕ್ಕಿದೆ. ಒಂದೆಡೆ ಪಂದ್ಯ ಗೆದ್ದ ಖುಷಿಯಾದರೆ ಮತ್ತೊಂದೆಡೆ ಗೆಳತಿ ಆಥಿಯಾ ಶೆಟ್ಟಿಯ ಜನ್ಮದಿನ. ಗೆಳತಿಯ ಬರ್ತಡೇಗೆ ರಾಹುಲ್ ಅರ್ಧಶತಕದ ಗಿಫ್ಟ್ ನೀಡಿದರು. ಗ್ಯಾಲರಿಯಲ್ಲಿ ಕುಳಿತಿದ್ದ ಆಥಿಯಾ ಗೆಳೆಯ ರಾಹುಲ್ ಗೆ ಚಿಯರ್ ಮಾಡಿದರು.

ದುಬೈನಲ್ಲಿ ಟೀಂ ಇಂಡಿಯಾ ದೀಪಾವಳಿ
ಸ್ಕಾಟ್ಲೆಂಡ್ ವಿರುದ್ಧ ಭರ್ಜರಿ ಜಯ ಸಾಧಿಸಿದ ಬಳಿಕ ಟ್ವಿಟ್ಟರ್ ಪೋಸ್ಟ್ ಮಾಡಿದ ಕೆ.ಎಲ್.ರಾಹುಲ್ ಅವರು ಮೊದಲ ಬಾರಿಗೆ ತನ್ನ ಪ್ರೀತಿಯ ಬಗ್ಗೆ ಅಧಿಕೃತವಾಗಿ ಹೇಳಿಕೊಂಡಿದ್ದಾರೆ. ” ಹ್ಯಾಪಿ ಬರ್ತ್ ಡೇ ಮೈ ಲವ್ ಆಥಿಯಾ ಶೆಟ್ಟಿ” ಎಂದು ಕೆ.ಎಲ್ ಬರೆದುಕೊಂಡಿದ್ದಾರೆ.

ಈ ಮೂಲಕ ಅಧಿಕೃತವಾಗಿ ನಾನು ಆಥಿಯಾ ಶೆಟ್ಟಿಯ ಪ್ರೀತಿ ಎಂಬುದನ್ನ ತೋರಿಸಿದ್ದಾರೆಂದು ಸಾಮಾಜಿಕ ಜಾಲತಾಣದಲ್ಲಿ ಚರ್ಚೆ ಆರಂಭವಾಗಿದೆ.