ಉದ್ಯೋಗ ಸೃಷ್ಟಿ ಮೇಳದ 2ನೆ ದಿನವನೂ ಉತ್ತಮ ಸ್ಪಂದನೆ ದೊರೆತ್ತಿರುವುದು ಸಂತೋಷ ತಂದಿದೆ: ಶಾಸಕ ರಾಮದಾಸ್
1 min read
ಮೈಸೂರು: ಮೈಸೂರಿನಲ್ಲಿ ದಿನಾಂಕ 04.01.2022 ರ ಮಂಗಳವಾರದಿಂದ 08.01.2021 ರ ಶನಿವಾರದ ವರೆಗೆ ಹಮ್ಮಿಕೊಂಡಿರುವ ಬೃಹತ್ ಉದ್ಯೋಗ, ಕೌಶಲ್ಯಾಭಿವೃದ್ಧಿ, ಸ್ವಯಂ-ಉದ್ಯೋಗ ನೋಂದಾವಣಿ ಕಾರ್ಯಕ್ರಮದ ಎರಡನೇ ದಿನವಾದ ಇಂದು ವಿದ್ಯಾರಣ್ಯಪುರಂ ನ ಒಕ್ಕಲಿಗರ ಹಾಸ್ಟೆಲ್ ನಲ್ಲಿ ನಡೆಯಿತು.
ಬೆಳಗ್ಗಿನಿಂದ ವಿದ್ಯಾರ್ಥಿಗಳು, ಯುವ ಜನತೆ ಹಾಗೂ ಸ್ವಯಂ ಉದ್ಯೋಗ ನಡೆಸಬೇಕೆಂಬ ಇಚ್ಛೆ ಇರುವವರು ಬ್ಯಾಚ್ ರೀತಿಯಾಗಿ ಬಂದು ಕಾರ್ಯಕ್ರಮದಲ್ಲಿ ಪಾಲ್ಗೊಂಡರು.
ವಿದ್ಯಾರ್ಥಿಗಳನ್ನು ಕುರಿತ ಸಮಾಲೋಚನೆಯಲ್ಲಿ ಮಾತನಾಡಿದ ಮಾನ್ಯ ಶಾಸಕರಾದ ಎಸ್.ಎ.ರಾಮದಾಸ್ ಅವರು ಉದ್ಯೋಗ ಸೃಷ್ಟಿ ಮೇಳದ 2 ನೆ ದಿನವನೂ ಕೂಡಾ ಉತ್ತಮವಾದ ಸ್ಪಂದನೆ ದೊರೆಯುತ್ತಿರುವುದು ಸಂತೋಷ ತಂದಿದೆ. ಕಾಲೇಜು , ಶಾಲಾ ಸಮಯದಲ್ಲೇ ತಮಗೆ ಬೇಕಾದ ಕೌಶಲ್ಯವನ್ನು ತೆಗೆದುಕೊಳ್ಳುವ ನಿಟ್ಟಿನಲ್ಲಿ ವಿದ್ಯಾರ್ಥಿಗಳು ಸ್ಟಾಲ್ ಗಳನ್ನು ನೋಡಿ ತಮಗೆ ಯಾವ ರಂಗದಲ್ಲಿ ಮುಂದುವರೆಯಬೇಕೆಂಬುದನ್ನು ಬರೆದು ಕೊಟ್ಟಿದ್ದಾರೆ. 10 ವರ್ಷಗಳ ಕಾಲದ ಈ ಯೋಜನೆಗೆ ಸರ್ಕಾರದಲ್ಲಿ ಯಾವ ರೀತಿಯಾದ ಬದಲಾವಣೆ ಆಗಬೇಕಾಗಿದೆ, ಹೊಸ ಕಾನೂನಾಗಬೇಕಾಗಿದೆ ಎಂಬುದರ ಬಗ್ಗೆ ನಾನು ಮುಖ್ಯಮಂತ್ರಿಗಳಿಗೆ ಪತ್ರ ಬರೆದು ಮನವಿ ಮಾಡುವವರಿದ್ದೇವೆ. ಮುಂದಿನ ಬಜೆಟ್ ನಲ್ಲಿ ಯಾವ ಯಾವ ಯೋಜನೆಗಳನ್ನು ಇದಕ್ಕೆ ತರಬೇಕು ಎಂಬುದಾಗಿ ನಾವು ಇಲಾಖೆಗಳ ಬಳಿ ಸಂಗ್ರಹಿಸಿ ಸರ್ಕಾರಕ್ಕೆ ಕೊಡುವವರಿದ್ದೇವೆ, ನಗರ ಪ್ರದೇಶದ ಹೊರತಾಗಿ ಗ್ರಾಮೀಣ ಪ್ರದೇಶಕ್ಕೂ ಕೂಡಾ ಇಂತಹ ಯೋಜನೆಗಳು ತಲುಪಬೇಕಾಗಿದೆ , ಆ ನಿಟ್ಟಿನಲ್ಲಿ ನಮ್ಮ ಕಾರ್ಯ ಆಗಬೇಕಿದೆ ಎಂದರು.
ಕೋವಿಡ್ ನಿಯಮಾವಳಿಗಳನ್ನು ಪಾಲಿಸಿಕೊಂಡು ವಿದ್ಯಾರ್ಥಿಗಳು ಬ್ಯಾಚ್ ವೈಸ್ ಬಂದು ಕಾರ್ಯಕ್ರಮದಲ್ಲಿ ಭಾಗಿಯಾದರು, ಅರ್ಹ ವಿದ್ಯಾರ್ಥಿಗಳಿಗೆ ವ್ಯಾಕ್ಸಿನೇಷನ್ ಅನ್ನು ಸಹ ನೀಡಿ ಕಳುಹಿಸಲಾಯಿತು.
ಸದರಿ ಕಾರ್ಯಕ್ರಮದಲ್ಲಿ ಬಿಜೆಪಿ ಮೈಸೂರು ನಗರ ಅಧ್ಯಕ್ಷರಾದ ಶ್ರೀವತ್ಸ , ಬಿಜೆಪಿ ಕೆ.ಆರ್ ಕ್ಷೇತ್ರದ ಅಧ್ಯಕ್ಷರಾದ ಎಂ.ವಡಿವೇಲು, ಪ್ರಧಾನಕಾರ್ಯದರ್ಶಿ ಓಂ ಶ್ರೀನಿವಾಸ್, ನಾಗೇಂದ್ರ ಕುಮಾರ್, ಉಪಾಧ್ಯಕ್ಷರಾದ ಸಂತೋಷ್ ಶಂಭು, ಒಬಿಸಿ ಮೋರ್ಚಾದ ಶಿವಪ್ಪ, ಯುವಮೋರ್ಚಾ ಅಧ್ಯಕ್ಷರಾದ ಮನು ಶೈವ (ಅಪ್ಪಿ) ಆಶ್ರಯ ಸಮಿತಿ ಸದಸ್ಯರಾದ ಹೇಮಂತ್ ಕುಮಾರ್, ವಾರ್ಡ್ ಉಸ್ತುವಾರಿಗಳಾದ ಸಂತೋಷ್(ಗ್ರಿಲ್) , ಶ್ರೀಮತಿ ವಿದ್ಯಾ ಅರಸ್, ಪುರುಷೋತ್ತಮ್ , ಪಿ.ಟಿ. ಕೃಷ್ಣ, ನಾಗಶಂಕರ್, ಸ್ಥಳೀಯ ನಗರಪಾಲಿಕಾ ಸದಸ್ಯರುಗಳು, ವಿವಿಧ ಇಲಾಖೆಗಳ ಅಧಿಕಾರಿಗಳು ಹಾಜರಿದ್ದರು.