ಗರಿಷ್ಠ ಮಟ್ಟ ತಲುಪಿದ ಕಬಿನಿ ಜಲಾಶಯದ ನೀರಿನ ಪ್ರಮಾಣ: ಹೆಚ್ವಿವರಿ ನೀರು ಹೊರಕ್ಕೆ
1 min read
ಮೈಸೂರು: ಮೈಸೂರು ಹಾಗೂ ಕೇರಳ ಭಾಗದಲ್ಲಿ ನಿರಂತರ ಮಳೆ ಹಿನ್ನೆಲೆ ಕಬಿನಿ ಜಲಾಶಯದ ನೀರಿನ ಪ್ರಮಾಣ ಗರಿಷ್ಠ ಮಟ್ಟ ತಲುಪಿದೆ. ಹೀಗಾಗಿ ಹೆಚ್ವಿವರಿ ನೀರು ಹೊರಕ್ಕೆ ಬಿಡಲಾಗುತ್ತಿದೆ.
ಎಚ್.ಡಿ ಕೋಟೆ ತಾಲೂಕಿನ ಬೀಚನಹಳ್ಳಿಯಲ್ಲಿರುವ ಕಬಿನಿ ಜಲಾಶಯ ಗರಿಷ್ಠ ಮಟ್ಟ ತಲುಪಿತದ ಕಾರಣ ಅಣೆಕಟ್ಟೆಯಿಂದ ನೀರು ಹೊರಕ್ಕೆ ಬಿಡಲಾಗುತ್ತಿದೆ. ಜಲಾಶಯದ ಗರಷ್ಠ ಮಟ್ಟ 2284.00ಅಡಿಗಳು. ಇಂದಿನ ಮಟ್ಟ 2284.00 ಅಡಿಗಳು ಇದೆ.
ಇನ್ನು ಕಬಿನಿ ಜಲಾಶಯಕ್ಕೆ 4698 ಕ್ಯೂಸೆಕ್ ನೀರು ಹರಿದು ಬರುತ್ತಿದ್ದೆ. 4488 ಕ್ಯೂಸೆಕ್ ನೀರು ನದಿಯಿಂದ ಹೊರಕ್ಕೆ ಬಿಡಲಾಗುತ್ತಿದೆ. ಒಳ ಹರಿವುನ ಪ್ರಮಾಣ ಹೆಚ್ಚಾದಂತೆಲ್ಲ ಹೊರ ಹರುವಿನ ಪ್ರಮಾಣ ಹೆಚ್ವಳವಾಗಲಿದೆ. ಪ್ರಸ್ತುತ ಕಬಿನಿ ಜಲಾನಯನ ಪ್ರದೇಶದಲ್ಲಿ 12mm ರಷ್ಟು ಮಳೆ ಆಗಿದೆ. 19.52 ಟಿಎಂಸಿ ನೀರು ಸಂಗ್ರಹ ಸಾಮರ್ಥ್ಯವಿರುವ ಜಲಾಶಯ ಇದಾಗಿದೆ.