ಕವಲಂದೆ ಚೋಟಾ ಪಾಕಿಸ್ತಾನ್ ಪ್ರಕರಣ: ಎಫ್.ಐ.ಆರ್ ದಾಖಲು

1 min read

ನಂಜನಗೂಡು: ಕವಲಂದೆ ಬೋಲೇ ತೋ ಚೋಟಾ ಪಾಕಿಸ್ತಾನ್ ಠೀಕ್ ಹೈ ವಿಡಿಯೋ ಅಂಡ್ ಆಡಿಯೋ ಪ್ರಕರಣ ವಿರುದ್ದ ನಂಜನಗೂಡಿನ ಬಿಜೆಪಿಕಾರ್ಯಕರ್ತರು ಸಿಡಿದೆದ್ದಿದ್ದಾರೆ.

ತಪ್ಪಿತಸ್ಥರ ವಿರುದ್ದ ಕಾನೂನು ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದಾರೆ. ನಂಜನಗೂಡು ದೊಡ್ಡಕವಲಂದೆ ಠಾಣೆಯಲ್ಲಿ ಎಫ್.ಐ.ಆರ್ ದಾಖಲಿಸಿದ್ದಾರೆ.

ನಂಜನಗೂಡಿನ ಬಿಜೆಪಿ ನಗರಸಭಾ ಸದಸ್ಯ ಕಪಿಲೇಶ್ ಕವಲಂದೆ ಪೊಲೀಸ್ ಠಾಣೆ ಹಾಗೂ ನಂಜನಗೂಡಿನ ವೃತ್ತನಿರೀಕ್ಷಕ ಲಕ್ಷ್ಮಿಕಾಂತ್ ತಳವಾರ್ ಅವರಿಗೆ ದೂರು ನೀಡಿದ್ದಾರೆ ದೂರಿನನ್ವಯ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಎಫ್ ಐಆರ್ ದಾಖಲು ಮಾಡಿದ್ದಾರೆ. ಶಾಂತಿಗೆ ಭಂಗ ತರುವಂತಹ ವಿಡಿಯೋ ವನ್ನ ಸಾಮಾಜಿಕ ಜಾಲತಾಣದಲ್ಲಿ ಅಪ್ ಲೋಡ್ ಮಾಡಿ ಸೌಹಾರ್ಧತೆಗೆ ಹಾಗೂ ದೇಶಭಕ್ತಿ ಭಾವನೆಗಳಿಗೆ ಧಕ್ಕೆ ತರುವಂತಹ ಪ್ರಯತ್ನ ಮಾಡಿದ್ದಾರೆ.

ಸಾಮರಸ್ಯತೆಗೆ ಧಕ್ಕೆ ತಂದು ವೈರತ್ವ ಬೆಳೆಯವಂತೆ ನಡೆದುಕೊಂಡಿದ್ದಾರೆಂದು ದೂರಿನಲ್ಲಿ ಕಪಿಲೇಶ್ ಉಲ್ಲೇಖಿಸಿದ್ದಾರೆ. ಕೂಡಲೇ ದುಷ್ಕರ್ಮಿಗಳ ವಿರುದ್ದ ಕ್ರಮ ಕೈಗೊಂಡು ಬಂದಿಸುವಂತೆ ಕಲಪಿಲೇಶ್ ಒತ್ತಾಯಿಸಿದ್ದಾರೆ.

About Author

Leave a Reply

Your email address will not be published. Required fields are marked *