ಒಂದೇ ವರ್ಷದಲ್ಲಿ ನಿವಿನ್‌ ಪೌಲಿ ಅಭಿನಯದ ನಾಲ್ಕು ಸಿನಿಮಾಗಳು ತೆರೆಗೆ

1 min read

ಸಿನಿಮಾ: ಮಾಲಿವುಡ್ ಸ್ಟಾರ್ ನಿವಿನ್ ಪೌಲಿಯವರ ಹುಟ್ಟುಹಬ್ಬದ ಸಂದರ್ಭದಲ್ಲಿ ಅವರ ಮುಂಬರುವ ಬ್ಯಾಕ್‌ ಟು ಭ್ಯಾಕ್‌ ಸಿನಿಮಾಗಳನ್ನ ಅನೌನ್ಸ್‌ ಮಾಡಿದ್ದಾರೆ…ಈಗಾಗಲೇ ಮಲಯಾಳಂ ಇಂಡಸ್ಟ್ರಿಯಲ್ಲಿ ವರ್ಸಟೈಲ್‌ ಆಕ್ಟರ್‌ ಅಂತಾನೆ ಗುರುತಿಸಿಕೊಂಡಿರೋ ನಿವಿನ್‌ ಪೌಲಿ ವಿಭಿನ್ನ ಪಾತ್ರಗಳ ಮೂಲಕ ಮತ್ತೆ ಪ್ರೇಕ್ಷಕರ ಮುಂದೆ ಬರಲಿದ್ದಾರೆ…

ಮೊದಲಿಗೆ ‘ಸರ್ವಂ ಮಾಯ’, ಅನ್ನೋ ಹಾರರ್ ಕಾಮಿಡಿ ಸಿನಿಮಾ, 2025ರ ಕ್ರಿಸ್ಮಸ್ ಹಬ್ಬಕ್ಕೆ ಬಿಡುಗಡೆಯಾಗಲಿದೆ. ಈ ಚಿತ್ರದಲ್ಲಿ ಅಜು ವರ್ಗೀಸ್ ಅವರೊಂದಿಗೆ ನಿವಿಲ್‌ ಮತ್ತೆ ಕಾಣಿಸಿಕೊಳ್ಳಲಿದ್ದಾರೆ.. ಅದರ ನಂತರ ‘ಬೆತ್ಲೆಹೆಮ್ ಕುಟುಂಬ ಯುನಿಟ್’,ಎಂಬ ಸಿನಿಮಾ ತೆರೆಗೆ ಬರಲಿದೆ. ಬ್ಲಾಕ್‌ಬಸ್ಟರ್ ಪ್ರೇಮಲು ತಂಡದಿಂದ ಸಿದ್ಧವಾಗುತ್ತಿರುವ ರೊಮ್ಯಾಂಟಿಕ್ ಕಾಮಿಡಿ ಚಿತ್ರ ಇದಾಗಿದ್ದು ಈ ಚಿತ್ರದಲ್ಲಿ ನಿವಿನ್‌ ಪೌಲಿ ಜೊತೆ ಮಮಿತಾ ಬೈಜು ನಟಿಸುತ್ತಿದ್ದಾರೆ.

ಇವುಗಳ ಜೊತೆಗೆ ‘ಬೆಬಿ ಗರ್ಲ್’ ಎಂಬ ಥ್ರಿಲ್ಲರ್‌ ಸಿನಿಮಾದಲ್ಲಿ ನಿವಿನ್ ಅಭಿನಯಿಸಿದ್ದಾರೆ…ಇದ್ರ ಜೊತೆಗೆ ತಮಿಳಿನಲ್ಲಿ ನಿರ್ದೇಶಕ ರಾಮ್ ಆಕ್ಷನ್‌ ಕಟ್‌ ಹೇಳ್ತಿರೋ ವಿಶಿಷ್ಟ ರೊಮ್ಯಾಂಟಿಕ್ ಸೈಕಲಾಜಿಕಲ್ ಥ್ರಿಲ್ಲರ್ “ಏಳು ಕಡಲ್ ಏಳು ಮಲೈ” ಶೀಘ್ರದಲ್ಲೇ ಬಿಡುಗಡೆಯಾಗಲಿದೆ.
ಇದೆಲ್ಲದಕ್ಕಿಂತಲೂ ದೊಡ್ಡ ಸುದ್ದಿ ಎಂದರೆ, ಲೋಕೇಶ್ ಕನಗರಾಜ್‌ ನಿರ್ಮಾಣದ ‘ಬೆನ್ಜ್’ ಚಿತ್ರದಲ್ಲಿ “ವಾಲ್ಟರ್” ಪಾತ್ರದ ಮೂಲಕ ಡಿಫ್ರೆಂಟ್‌ ಆಗಿ ಪ್ರೇಕ್ಷಕರ ಮುಂದೆ ಬರಲಿದ್ದಾರೆ ನಿವಿಲ್‌ ಪೌಲಿ…

ಬ್ಯಾಕ್‌ ಟು ಬ್ಯಾಕ್‌ ಸಿನಿಮಾಗಳ ಜೊತೆಗೆ ಬಹು ನಿರೀಕ್ಷಿತ ವೆಬ್ ಸೀರೀಸ್ ‘ಫಾರ್ಮಾ’ ಮೂಲಕ ಡಿಜಿಟಲ್ ಕ್ಷೇತ್ರಕ್ಕೂ ಪದಾರ್ಪಣೆ ಮಾಡುತ್ತಿದ್ದಾರೆ. ಇದಷ್ಟೇ ಅಲ್ಲದೆ ನಿರ್ಮಾಪಕರಾಗಿ ನಿವಿನ್‌ ಪೌಲಿ ‘ಪಾನ್ ಇಂಡಿಯನ್ ಸೂಪರ್‌ಹೀರೋ ಫಿಲ್ಮ್ – ಮಲ್ಟಿವರ್ಸ್ ಮನುಮಧನ್’ ಹಾಗೂ ನಯನತಾರಾ ಅಭಿನಯದ ‘ಡಿಯರ್ ಸ್ಟುಡೆಂಟ್ಸ್’ ಮುಂತಾದ ಮಹತ್ವಾಕಾಂಕ್ಷಿ ಚಿತ್ರಗಳಿಗೆ ಬೆಂಬಲ ನೀಡುತ್ತಿದ್ದಾರೆ. ಒಟ್ಟಾರೆ ಬ್ಯಾಕ್‌ ಟು ಬ್ಯಾಕ್‌ ಸಿನಿಮಾಗಳು ವೆಬ್‌ ಸೀರಿಸ್‌ ಹಾಗೀ ನಿರ್ಮಾಣದಲ್ಲಿಯೂ ಬ್ಯುಸಿ ಆಗಿದ್ದಾರೆ ನಿವಿನ್‌ ಪೌಲಿ

About Author

Leave a Reply

Your email address will not be published. Required fields are marked *