ನಾಳೆಯಿಂದ ಮೈಸೂರಿನಲ್ಲಿ ಶಾಲಾ ತರಗತಿ ಇಲ್ಲ!
1 min read
ನಾಳೆಯಿಂದ ಮುಂದಿನ ಆದೇಶದವರಗು ಮೈಸೂರು ನಗರ ಮತ್ತು ಮೈಸೂರು ತಾಲ್ಲೂಕಿನ ವ್ಯಾಪ್ತಿಯಲ್ಲಿರುವ ಎಲ್ಲಾ ಶಾಲೆಗಳಲ್ಲಿ ಭೌತಿಕ ತರಗತಿಗಳನ್ನು ಸ್ಥಗಿತಗೊಳಿಸಿ ಮೈಸೂರು ಜಿಲ್ಲಾಧಿಕಾರಿಗಳಾದ ಡಾ.ಬಗಾದಿ ಗೌತಮ್ ಅವರು ಆದೇಶ ಹೊರಡಿಸಿದ್ದಾರೆ.

ಮೈಸೂರು ಮತ್ತು ತಾಲೂಕಿನಲ್ಲಿ ಅತಿ ಹೆಚ್ಚಿನ ಕರೋನಾ ಪ್ರಕರಣಗಳು ಕಂಡು ಬಂದ ಹಿನ್ನಲೆಯಲ್ಲಿ ಜಿಲ್ಲಾಧಿಕಾರಿಗಳು ಈ ಕ್ರಮ ಕೈಗೊಂಡಿದ್ದಾರೆ. ಅಲ್ಲದೆ ಮೈಸೂರು ನಗರ ಮತ್ತು ಮೈಸೂರು ತಾಲ್ಲೂಕು ಹೊರತುಪಡಿಸಿ ಜಿಲ್ಲೆಯ ಇತರೆ ಪ್ರದೇಶದಲ್ಲಿರುವ ಶಾಲೆಗಳಲ್ಲಿ ಕೋವಿಡ್ ನಿಯಮಗಳನ್ನು ಪಾಲಿಸಿಕೊಂಡು

ಭೌತಿಕ ತರಗತಿಗಳನ್ನು ಮಾತ್ರ ನಡೆಸಲು ಅವಕಾಶವಿರುತ್ತದೆ. ಉಳಿದಂತೆ ನಗರ ಮತ್ತು ತಾಲೂಕಿನಲ್ಲಿ ಆನ್ಲೈನ್ ತರಗತಿಗೆ ಆದ್ಯತೆ ನೀಡಲಾಗಿದೆ.