ಮೈಸೂರಿನಲ್ಲಿ ಅಂಗನವಾಡಿ‌ ಮಕ್ಕಳ ಮೇಲೆ‌ ಸರ್ಕಾರದ ಆಟ… ಮಕ್ಕಳಿಗೆ ನೀಡುವ ದಿನಸಿ ಕಿಟ್‌‌ನಲ್ಲಿ ಪ್ಲಾಸ್ಟಿಕ್ ಅಕ್ಕಿ ಪತ್ತೆ!?

1 min read

ಮೈಸೂರು: ಮಕ್ಕಳಿಗೆ ನೀಡುವ ದಿನಸಿ ಕಿಟ್‌‌ನಲ್ಲಿ ಪ್ಲಾಸ್ಟಿಕ್ ಅಕ್ಕಿ ಪತ್ತೆ ಆಗಿದೆ ಎಂದು ಆತಂಕಗೊಂಡ ಪೋಷಕರಿಂದ ಅಂಗನವಾಡಿಗೆ ವಾಪಸ್ ದಿನಸಿ ಕಿಟ್ ತಂದಿರುವ ಘಟನೆ ಮೈಸೂರು ತಾಲೂಕಿನ ಹಾರೋಹಳ್ಳಿ ಅಂಗನವಾಡಿ ಕೇಂದ್ರದಲ್ಲಿ ನಡೆದಿದೆ.

ಪೋಷಕರು ಮನೆಗೆ ತೆಗೆದುಕೊಂಡು ಹೋಗಿದ್ದ ಅಕ್ಕಿ ನೀರಿಗೆ ಹಾಕಿದ ವೇಳೆ‌ ಇದು ಗೊತ್ತಾಗಿದ್ದು ಆತಂಕಗೊಂಡಿದ್ದಾರೆ. ಏಕಾಏಕಿ ಅಕ್ಕಿ ತೇಲುತ್ತ ಮೇಲೆ ಬಂದಿದೆ. ಅರ್ಧ ಕೆಜಿ ಅಕ್ಕಿ ನೀರಿಗೆ ಹಾಕಿದ ವೇಳೆ‌ 50 ರಿಂದ 60 ಗ್ರಾಂನಷ್ಟು ಅಕ್ಕಿ ತೇಲಿದೆ. ಇದರಿಂದ ಆತಂಕಗೊಂಡ ಗ್ರಾಮದ ಕುಮಾರ್ ಎಂಬುವವರು. ಕೂಡಲೇ ಅಂಗನವಾಡಿಗೆ ವಿಷಯ ತಿಳಿಸಿ ಗ್ರಾ.ಪಂ ಪಿಡಿಓಗೆ ಮಾಹಿತಿ ನೀಡಿದ್ದಾರೆ.

ಆದರೆ ಪಿಡಿಓ ಈ ಬಗ್ಗೆ ಸಂಬಂಧಪಟ್ಟ ಅಧಿಕಾರಿಗೆ ತಿಳಿಸುವುದಾಗಿ ಹೇಳಿಕೆ ನೀಡಿದ್ದಾರೆ. ಕಳೆದ 10 ದಿನ ಕಳೆದರು ಅಕ್ಕಿಯ ಬಗ್ಗೆ ಸ್ಪಷ್ಟ ಮಾಹಿತಿ ನೀಡಿದ ಅಧಿಕಾರಿಗಳು. ಅಕ್ಕಿ ತಿನ್ನಬೇಕಾ? ಬೇಡವಾ ಎಂದು ಆತಂಕದಲ್ಲೇ ಇರುವ ಕುಮಾರ್ ಕುಟುಂಬ. ನೀರಿಗೆ ನೆನೆಯಲು ಹಾಕಿದ್ದ ಅಕ್ಕಿಯನ್ನು ಬಿಸಾಡಿರುವ ಕುಮಾರ್. ಸ್ಥಳೀಯ ಗ್ರಾ.ಪಂ ಸದಸ್ಯನ ಮೂಲಕ ಸ್ಥಳೀಯ ಮುಖಂಡರಿಗೆ ಮಾಹಿತಿ. ಈ ವೇಳೆ ಅಂಗನವಾಡಿಗೆ ಬಂದು ಮಾಹಿತಿ ಪಡೆದ ಗ್ರಾ.ಪಂ ಸದಸ್ಯ ಹಾಗೂ ಸ್ಥಳೀಯ ಮುಖಂಡ‌ ಮೋಸಿನ್.

ಸೂಪರ್‌ವೈಸರ್‌ಗೆ ಕೇಳಿದ್ರೆ ಇದು ವಿಟಮಿನ್ ಅಕ್ಕಿ ಎನ್ನುತ್ತಿದ್ದಾರೆ. ಮೊದಲು ಈ ಸಮಸ್ಯೆ ನಾಲ್ಕೈದು ಕಡೆಗಳಲ್ಲಿ ಬಂದಿದೆ. ನಾವು ಹಿರಿಯ ಅಧಿಕಾರಿಗೆ ಕೇಳಿದ ವೇಳೆ ಇದು ವಿಟಮಿನ್‌ ಮಿಕ್ಸ್ ಎಂದು ಹೇಳಿಕೆ. ಅಕ್ಕಿಯೊಳಗೆ ವಿಟಮಿನ್ಸ್ ಹಾಕಿರುವುದಾಗಿ ಹೇಳುತ್ತಿರೋ ಸೂಪರ್‌ವೈಸರ್‌. ಆದರೆ ಈ ವಿಟಮಿನ್ ಮಾಹಿತಿ ಯಾಕೆ ಚೀಲದಲ್ಲಿ ನಮೂದಿಸಿಲ್ಲ ಎಂದು ಪೋಷಕರ ಪ್ರಶ್ನೆ. ಮಕ್ಕಳಿಗೆ ನೀಡುವ ದಿನಸಿಯನ್ನ ಸೀಲ್ ಮಾಡಿ ನೀಡುತ್ತಿರೋ ಸರ್ಕಾರ. ಇದರಿಂದ ಒಳಗೆನಿದೆ ಎಂದು ಓಪನ್ ಆಗುವ ವರೆಗು ಗೌಪ್ಯ.

ಸದ್ಯ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಈ ವ್ಯಾಪ್ತಿಯ 29 ಮಕ್ಕಳಿಗೆ ದಿನಸಿ ಕಿಟ್ ನೀಡಲಾಗಿದೆ. ಮೈಸೂರಿನಾದ್ಯಂತ 300 ಅಂಗನವಾಡಿ ಕೇಂದ್ರಕ್ಕೆ ನೀಡಲಾಗಿದೆ. ಈಗಾಗಲೇ ಎಲ್ಲರು ದಿನಸಿ ಕಿಟ್ ಬಳಕೆ ಮಾಡಿರೋ ಬಗ್ಗೆ ಮಾಹಿತಿ. ಆದರೆ ಕುಮಾರ್ ಸೇರಿ ಇಬ್ಬರು ಮಾತ್ರ ಇದನ್ನ ಇನ್ನು ಬಳಕೆ ಮಾಡಿಲ್ಲ. ತೇಲುವ ಈ‌ ಅಕ್ಕಿ ರುಚಿಯು ಇಲ್ಲ, ಚ್ವಿಂಗಮ್ ರೀತಿ ಇದೆ. ಅಂಗನವಾಡಿ ಕೇಂದ್ರದಲ್ಲಿ ಅಕ್ಕಿಯ ಪರೀಕ್ಷೆ. ಈ ವೇಳೆ ನೀರಿಗೆ ಹಾಕಿದ್ದ ಅಕ್ಕಿ ತೇಲುವ ದೃಶ್ಯ ಬಟಾ ಬಯಲು ಆಗಿದೆ.

ಅಕ್ಕಿ ನೀರಿನಲ್ಲಿ ಹೇಗೆ ತೇಲುತ್ತಿದೆ ಎಂಬುದೇ ಯಕ್ಷ ಪ್ರಶ್ನೆ‌. ಈ ಬಗ್ಗೆ ಸ್ಪಷ್ಟನೆ ಕೊಡಬೇಕಿದೆ ಹಿರಿಯ ಅಧಿಕಾರಿಗಳು.

About Author

Leave a Reply

Your email address will not be published. Required fields are marked *