ಶಾಸಕ ಜಿ.ಟಿ ದೇವೇಗೌಡ ಮೊಮ್ಮಗಳು ವಿಧಿವಶ ಹಿನ್ನೆಲೆ: ಪ್ರಧಾನಿ ಮೋದಿ ಸಾಂತ್ವನ
1 min read
ಮೈಸೂರು: ಶಾಸಕ ಜಿ ಟಿ ದೇವೇಗೌಡ ಮೊಮ್ಮಗಳು ವಿಧಿವಶ ಹಿನ್ನೆಲೆ ಜಿ ಟಿ ದೇವೇಗೌಡರಿಗೆ ಪ್ರಧಾನಿ ನರೇಂದ್ರ ಮೋದಿ ಸಾಂತ್ವನ ಹೇಳಿದ್ದಾರೆ.
ಈ ಬಗ್ಗೆ ಶಾಸಕ ಜಿ ಟಿ ದೇವೇಗೌಡಗೆ ಪ್ರಧಾನಿ ನರೇಂದ್ರ ಮೋದಿ ಅವರು ಪತ್ರ ಬರೆದಿದ್ದಾರೆ.
ಪತ್ರದ ಸಾರಾಂಶ: ಶ್ರೀ ಜಿ ಟಿ ದೇವೇಗೌಡ ಜಿ, ನಿಮ್ಮ ಮೊಮ್ಮಗಳು ಗೌರಿ ಅವರ ನಿಧನದ ಬಗ್ಗೆ ತಿಳಿದು ನನಗೆ ಆಘಾತವಾಗಿದೆ ಮತ್ತು ತೀವ್ರ ನೋವಾಗಿದೆ.
ಇಷ್ಟು ಎಳೆ ವಯಸ್ಸಿನಲ್ಲಿ ಆಕೆ ಇಹಲೋಕ ತ್ಯಜಿಸಿದ್ದಾಳೆ ಎಂದರೆ ನಂಬುವುದು ಅಸಾಧ್ಯ. ತೀವ್ರ ದುಃಖದ ಈ ಸಮಯದಲ್ಲಿ ನನ್ನ ಹೃತ್ಪೂರ್ವಕ ಸಂತಾಪಗಳು ಅಂತಹ ಚಿಕ್ಕ ವಯಸ್ಸಿನಲ್ಲಿ ಮಗುವಿನ ನಷ್ಟವು ಪೋಷಕರಿಗೆ ಮತ್ತು ಅಜ್ಜನಾದ ನಿಮಗೆ ಅತ್ಯಂತ ಕಷ್ಟಕರ ಸಮಯವಾಗಿದೆ. ಕುಟುಂಬಕ್ಕೆ ಆದ ನಷ್ಟ ಪದಗಳಿಗೆ ಮೀರಿದೆ ಗೌರಿ ಬಿಟ್ಟು ಹೋಗಿರುವ ನೆನಪುಗಳು ಕುಟುಂಬಕ್ಕೆ ಸಾಂತ್ವನ ನೀಡಲಿ.
ಈ ತುಂಬಲಾರದ ನಷ್ಟವನ್ನು ಭರಿಸುವ ಶಕ್ತಿಯನ್ನು ಕುಟುಂಬದ ಸದಸ್ಯರಿಗೆ ಮತ್ತು ಹಿತೈಷಿಗಳಿಗೆ ಭಗವಂತನು ನೀಡಲಿ ಎಂದು ಪ್ರಾರ್ಥಿಸುತ್ತೇನೆ. ಅಗಲಿದ ಆತ್ಮಕ್ಕೆ ಶಾಂತಿ ಸಿಗಲಿ ಅಂತ ನರೇಂದ್ರ ಮೋದಿ ಅವರು ಪತ್ರದ ಮೂಲಕ ಸಾಂತ್ವನ ಹೇಳಿದ್ದಾರೆ.
