ನಗರದಲ್ಲಿ ನಿನ್ನೆ ತಡರಾತ್ರಿ ಜೋಡಿ ಕೊಲೆ: ಮಗನಿಂದಲೇ ತಂದೆಯ ಬರ್ಬರ ಹತ್ಯೆ
1 min read
ಮೈಸೂರು,ಅ.22- ನಗರದ ಹೊರವಲಯದಲ್ಲಿ ಜೋಡಿ ಕೊಲೆಯಾಗಿದ್ದು, ಮಗನೇ ತಂದೆಯನ್ನು ಕೊಲೆಗೈದಿರುವ ಘಟನೆ ಶ್ರೀ ನಗರದಲ್ಲಿ ನಿನ್ನೆ ತಡರಾತ್ರಿ ನಡೆದಿದೆ.

ತಂದೆ ಹಾಗೂ ತಂದೆಯ ಜೊತೆಗಿದ್ದ ಮಹಿಳೆಯ ಬರ್ಬರ ಕೊಲೆ ಮಾಡಲಾಗಿದೆ. ಶಿವಪ್ರಕಾಶ್ (56) ಮತ್ತು ಲತಾ (48) ಕೊಲೆಯಾದವರು. ಕೊಲೆ ಮಾಡಿದ ಸಾಗರ್ ನಾಪತ್ತೆಯಾಗಿದ್ದಾನೆ.

ಶಿವಪ್ರಕಾಶ್ ಕೆ.ಜಿ ಕೊಪ್ಪಲು ನಿವಾಸಿಯಾಗಿದ್ದು, ಅವರು ಶ್ರೀನಗರದ ನಿವಾಸಿ ಲತಾ ಅವರೊಂದಿಗೆ ಇದ್ದಾಗ ಮನೆಗೆ ನುಗ್ಗಿದ ಸಾಗರ್ ಮಚ್ಚಿನಿಂದ ಬರ್ಬರವಾಗಿ ಹತ್ಯೆಗೈದಿದ್ದಾನೆ.
ಮೊದಲು ತಂದೆಯನ್ನು ಕೊಲೆ ಮಾಡಿದ ಸಾಗರ್ ನಂತರ ಲತಾ ಅವರನ್ನು ಕೊಲೆ ಮಾಡಿದ್ದಾನೆ.

ಲತಾ ಮೇಲೆ ಹಲ್ಲೆಗೆ ಮುಂದಾದಗ ತಡೆಯಲು ಬಂದ ಲತಾ ಪುತ್ರ ನಾಗಾರ್ಜುನನ ಮೇಲೂ ಹಲ್ಲೆ ಮಾಡಿದ್ದಾನೆ. ಗಾಯಗೊಂಡಿರುವ ನಾಗಾರ್ಜುನನ್ನು ಆಸ್ಪತ್ರೆ ದಾಖಲಿಸಲಾಗಿದೆ. ದಕ್ಷಿಣ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಘಟನಾ ಸ್ಥಳಕ್ಕೆ ಎಸ್ ಪಿ ಚೇತನ್ ಭೇಟಿ ನೀಡಿ ಪರಿಶೀಲಿಸಿದ್ದಾರೆ. ಸ್ಥಳೀಯರ ಬಳಿ ಪೊಲೀಸರು ಮಾಹಿತಿ ಕಲೆ ಹಾಕಿದ್ದಾರೆ.