ಇಂದು, ನಾಳೆ ‘ಒಂದು ಸಣ್ಣ ಆಟ’ ನಾಟಕ ಪ್ರದರ್ಶನ
1 min read
ಮೈಸೂರು,ಫೆ.12-ಮೈಸೂರಿನ ಯವನಿಕ ತಂಡದ ವತಿಯಿಂದ ಇಂದು ಮತ್ತು ನಾಳೆ (ಫೆ.12-13) ರಂದು ಲಿಯೋ ಟಾಲ್ ಸ್ಟಾಯ್ ಅವರ “how much land does a man need ” ಕತೆ ಆಧಾರಿತ ನಾಟಕ ‘ಒಂದು ಸಣ್ಣ ಆಟ’ ಪ್ರದರ್ಶನಗೊಳ್ಳಲಿದೆ.
ರಂಗಾಯಣದ ಕಿರುರಂಗಮಂದಿರದಲ್ಲಿ ಸಂಜೆ 6.30ಕ್ಕೆ ನಾಟಕ ಪ್ರದರ್ಶನಗೊಳ್ಳಲಿದೆ. ನಾಟಕವನ್ನು ಶ್ರೀಕಂಠಸ್ವಾಮಿ ಅವರು ನಿರ್ದೇಶಿಸಿದ್ದು, ಸಂಗೀತ ಸಂಯೋಜನೆಯನ್ನು ಸನ್ನುತ ಅವರು ಮಾಡಿದ್ದಾರೆ. ಮಂಜು ಕಾಚಕ್ಕಿ ಅವರ ಪ್ರಸಾದನ ಮತ್ತು ಪರಿಕರ ನಾಟಕಕ್ಕಿದ್ದು, ಜೀವನ್ ಹೆಗ್ಗೋಡು ಬೆಳಕು ನೀಡಿದ್ದಾರೆ.
ನಾಟಕದ ಬಗ್ಗೆ:
ಒಂದು ಸಣ್ಣ ಆಟ ನಾಟಕದ ಮೂಲ ಲಿಯೋ ಟಾಲ್ ಸ್ಟಾಯ್ ಅವರ “how much land does a man need “.
“ಇರದುದರೆಡೆಗೆ ತುಡಿವುದೆ ಜೀವನ” ಎಂಬ ಸಾಲಿನಂತೆ ಅತಿ ಆಸೆಯ ಅರಸನಾಗ ಹೊರಟ ಅರಸೇಗೌಡನ ಕತೆಯಿದು. ಎಲ್ಲವೂ ಬೇಕು, ಇನ್ನಷ್ಟು ಬೇಕು, ಮತ್ತಷ್ಟು ಬೇಕು ಎಂದು ಬಯಸುವ ಮನಸ್ಸು ವಿನಾಶಕ್ಕೆ ದೂಡುತ್ತದೆ ಎಂಬುದು ಸರ್ವಕಾಲಿಕ ಸತ್ಯ. ಇತಿಹಾಸದ ಮಹಾಪುರುಷರು, ರಾಜದಿರಾಜರು ಇದಕ್ಕೆ ಹೊರತಲ್ಲ.
ಇದ್ದುದರಲ್ಲೇ ಬದುಕು ಹಸನಾಗಬೇಕು ಎಂಬುದ ಅರಿಯದೆ ಮಳೆ ಬಿಸಿಲಿನಲ್ಲಿ ಕಾಣುವ ಕನಸೆಂಬ ಕಾಮನ ಬಿಲ್ಲಿನ ಬಣ್ಣವನು ಹಿಡಿಯ ಹೊರಟ ಅಸಂಖ್ಯ ಜನಗಳ ಪ್ರತಿನಿಧಿ ಈ ಅರಸೇಗೌಡ.
ಪ್ರತೀ ಮನದ ಮೂಲೆಯಲ್ಲಿ ಮುದುರಿ ಕುಳಿತ
ಅತಿ ಆಸೆಯ ಮುಖವಾಡ ತೊಟ್ಟ ಪಿಶಾಚಿಯು, ಸರಳ-ಶಾಂತ ಬದುಕಿನ ಸ್ವಾಭಾವಿಕತೆಯೊಟ್ಟಿಗೆ ಆಡುವ ಜೂಜಾಟವೇ “ಒಂದು ಸಣ್ಣ ಆಟ”.
ನಾಟಕದ ಸಹಾಯ ಧನ 100 ರೂ.ಗಳಾಗಿದ್ದು, ಟಿಕೆಟ್ ಕಾಯ್ದಿರಿಸುವುದಕ್ಕಾಗಿ ಮೊ.ಸಂ. 9739357220, 7899885849 ಗೆ ಸಂಪರ್ಕಿಸಬಹುದಾಗಿದೆ.