ಕರ್ನಾಟಕದ ವರ್ಲ್ಡ್ ಬುಕ್ ಆಫ್ ರೆಕಾರ್ಡ್ ಉಪಾಧ್ಯಕ್ಷರಾಗಿ ವಸಂತ ಕವಿತಾ!
1 min read
ಬೆಂಗಳೂರು: ಕೆ.ಸಿ ರೆಡ್ಡಿ ಸರೋಜಮ್ಮ ವೆಲ್ಫೇರ್ ಫೌಂಡೇಶನ್ ಸ್ಥಾಪಕಿ ಹಾಗೂ ಕಾರ್ಯದರ್ಶಿ, ಶ್ರೀಮತಿ ವಸಂತ ಕವಿತಾ ಅವರನ್ನ ಕರ್ನಾಟಕದ ಲಂಡನ್‌ನ ವರ್ಲ್ಡ್ ಬುಕ್ ಆಫ್ ರೆಕಾರ್ಡ್ಸ್‌ನ ಉಪಾಧ್ಯಕ್ಷರಾಗಿ ನೇಮಕ ಮಾಡಲಾಗಿದೆ. ಈ ಬಗ್ಗೆ ಕ್ಲಬ್‌ನ ಅಧ್ಯಕ್ಷರಾದ ಡಾ.ದಿವಾಕರ್ ಶುಕ್ಲಾ ಅಧಿಕೃತವಾಗಿ ಮಾಹಿತಿ ನೀಡಿದ್ದು, ಸಂತೋಷ್ ಶುಕ್ಲಾ, ಶಿಖಾ ಶರ್ಮಾ ಸೇರಿ ವಸಂತಾ ಕವಿತಾ ಅವರಿಗೆ ಪತ್ರ ನೀಡಿ ಗೌರವಿಸಿದರು.

ಈ ವೇಳೆ ಸಚಿವ ರಾಮ್ ದಾಸ್ ಅಠವಾಲೆ ಮತ್ತು ಬಾಲಿವುಡ್ ಗೀತರಚನೆಕಾರ ಸಮೀರ್ ಅಂಜಾಮ್, ಹಾಡುಗಾರರಾದ ಉದಿತ್ ನಾರಾಯಣ ಸೇರಿದಂತೆ ನಟಿ ಜಯಪ್ರದಾ ಉಪಸ್ಥಿತರಿದ್ದರು.