ಮೈಸೂರು ಜಿಲ್ಲೆಯಲ್ಲಿ ಉರುಳಿಗೆ ಸಿಲುಕಿ ಗಂಡು ಹುಲಿ ಸಾವು.!

ಮೈಸೂರು ಜಿಲ್ಲೆ / HD ಕೋಟೆ

ಅಕ್ರಮವಾಗಿ ಜಮೀನಿನಲ್ಲಿ ಅಳವಡಿಸಿದ್ದ ಉರುಳಿಗೆ ಸಿಲುಕಿ ಗಂಡು ಹುಲಿಯೊಂದು ಸ್ಥಳದಲ್ಲಿಯೇ ಮೃತ ಪಟ್ಟಿರುವ ಘಟನೆ ತಾಲೋಕಿನ ಅಗಸನಹುಂಡಿ ಜಮೀನಿನಲ್ಲಿ ನಡೆದಿದೆ.

ಗಿರೀಶ್ ಎಂಬುವವರಿಗೆ ಸೇರಿದ ಜಮೀನಿನಲ್ಲಿ ಅಳವಡಿಸಿದ್ದ ಹುರುಳಿಗೆ ಸುಮಾರು 3ವರ್ಷದ ಗಂಡು ಹುಲಿ ಸಿಲುಕಿಕೊಂಡು ಉರುಳಿನಿಂದ ಹೊರ ಬರಲಾಗದೆ ಸಾವನ್ನಪ್ಪಿದೆ ಎಂದು ಮಾಹಿತಿ ಸಿಕ್ಕಿದೆ. ಕಳೆದ ಸುಮಾರು 2-3 ದಿನಗಳ ಹಿಂದೆಯೇ ಹುಲಿ ಮೃತಪಟ್ಟಿದ್ದು ಪ್ರಕರಣ ಇಂದು ಬೆಳಕಿಗೆ ಬಂದಿದೆ.

ತಜ್ಞರ ತಂಡ ಹುಲಿ ಮೃತದೇಹದ ಮರಣೋತ್ತರ ಪರೀಕ್ಷೆ ನೆರವೇರಿಸಿದ ಬಳಿಕ ಹುಲಿ ಕಳೆಬರಕ್ಕೆ ಅಗ್ನಿ ಸ್ಪರ್ಶ ಮಾಡಿದರು. ಕಾಡು ಹಂದಿಗಳ ಬೇಟೆಗಾಗಿ ಜಮೀನಿನಲ್ಲಿ ಕ್ರಮವಾಗಿ ಉರುಳು ಹಾಕಿರಬಹುದೆಂದು ಅಂದಾಜಿಸಲಾಗಿದ್ದು ತನಿಖೆ ನಂತರವಷ್ಟೇ ಸತ್ಯ ಸಂಗತಿ ಹೊರಬೀಳಬೇಕಿದೆ.

ನಾಗರಹೊಳೆ ರಾಷ್ಟ್ರೀಯ ಉದ್ಯಾನವನದ ಮೇಟಿಕುಪ್ಪೆ ಅರಣ್ಯ ವಲಯದ 2ನೇ ಗಸ್ತಿಗೆ‌ ಸೇರಿದ ಜಮೀನಿನಲ್ಲಿ ಹುಲಿ ಮೃತಪಟ್ಟಿರುವ ವಿಷಯ ತಿಳಿದು ಮೇಟಿಕುಪ್ಪೆ ವಲಯ ಅರಣ್ಯಾಧಿಕಾಂರಿಗಳ ತಂಡ ಸ್ಥಳಕ್ಕೆ ಬೇಟಿ ನೀಡಿ ಮಹಜರು ನಡೆಸಿದ‌ ಬಳಿಕ ಗಿರೀಶ್ ವಿರುದ್ದ ವನ್ಯಜೀವಿ ಕಾಯ್ದೆಯಡಿ ಪ್ರಕರಣ ದಾಖಲಿಸಿದ್ದಾರೆ.

About Author

Leave a Reply

Your email address will not be published. Required fields are marked *