ದಸರಾ ಚಲನಚಿತ್ರೋತ್ಸವ: ಕನ್ನಡ ಸಿನಿಮಾ ಬೆಳೆದು ಬಂದ ಹಾದಿ ಸಿನಿ ಪೋಟೋ ಪ್ರದರ್ಶನದ ಚಾಲನೆ

ಸಿನಿಮಾ: ದಸರಾ ಚಲನಚಿತ್ರೋತ್ಸವ ಸಂಬಂಧ ಇಂದು ಮಾಲ್ ಆಫ್ ಮೈಸೂರಿನ ಐನಾಕ್ಸ್ ಚಿತ್ರಮಂದಿರದ ಹೊರ ಆವರಣದಲ್ಲಿ ” ಕನ್ನಡ ಸಿನಿಮಾ ಬೆಳೆದು ಬಂದ ಹಾದಿ ಸಿನಿ ಪೋಟೋ ಪ್ರದರ್ಶನ ಹೆಸರಾಂತ ಚಿತ್ರ ನಿರ್ದೇಶಕಿ ಸುಮನ್ ಕಿತ್ತೂರು ಅವರು ಇಂದು ಚಾಲನೆ ನೀಡಿದರು.

ಈ ಸಂದರ್ಭದಲ್ಲಿ ಖ್ಯಾತ ಛಾಯಾಗ್ರಾಹಕರಾದ ಅಶ್ವನಾರಾಯಣ್ ಅವರು ಸೆರೆಹಿಡಿದಿರುವ ಅಪರೂಪದ ಚಿತ್ರಗಳ ಪ್ರದರ್ಶನ ಏರ್ಪಡಿಸಲಾಗಿದೆ.

ಚಲನಚಿತ್ರೋತ್ಸವ ಅಧಿಕಾರೇತರ ಸಮಿತಿಯ ಅಧ್ಯಕ್ಷರಾದ ಪ್ರವೀಣ್ ಕೃಪಾಕರ್, ಚಲನಚಿತ್ರೋತ್ಸವ ಉಪ ಸಮಿತಿಯ ಉಪ ವಿಶೇಷಾಧಿಕಾರಿ ಕೆ.ಎನ್.ಬಸವರಾಜ, ಕಾರ್ಯಾಧ್ಯಕ್ಷ ರಂಗೇಗೌಡ, ಕಾರ್ಯದರ್ಶಿ ಹರೀಶ್ ಟಿ.ಕೆ ಹಾಗೂ ಸಮಿತಿಯ ಎಲ್ಲಾ ಸದಸ್ಯರು ಉಪಸ್ಥಿತರಿದ್ದರು.

About Author

Leave a Reply

Your email address will not be published. Required fields are marked *