ಮೈಸೂರು ವಾಣಿಜ್ಯ ಮಂಡಳಿ ಮತ್ತು ಜೈನ್ ಮಿಲನ್ ಚಾರಿಟೇಬಲ್ ಟ್ರಸ್ಟ್ ವತಿಯಿಂದ ವಿಕಲಾಂಗ ಕುರ್ಚಿಗಳು ಮತ್ತು ಕುಡಿಯುವ ನೀರಿನ ಮಡಕೆಗಳ ಕೊಡುಗೆ
ಮೈಸೂರು: ಸಾರ್ವಜನಿಕ ಸೇವೆ ಮತ್ತು ಪ್ರಯಾಣಿಕರ ಕಲ್ಯಾಣದತ್ತ ಶ್ಲಾಘನೀಯ ಹೆಜ್ಜೆಯಾಗಿ, ಮೈಸೂರು ವಾಣಿಜ್ಯ ಮಂಡಳಿ ಹಾಗೂ ಜೈನ್ ಮಿಲನ್ ಚಾರಿಟೇಬಲ್ ಟ್ರಸ್ಟ್, ಮೈಸೂರು ವತಿಯಿಂದ 10 ವಿಕಲಾಂಗ ಕುರ್ಚಿಗಳು ಮತ್ತು 25 ಕುಡಿಯುವ ನೀರಿನ ಮಡಕೆಗಳನ್ನು ಕೊಡುಗೆಯಾಗಿ ನೀಡಿದ್ದಾರೆ.
ನೀಡಲಾದ ವಿಕಲಾಂಗ ಕುರ್ಚಿಗಳು ವೃದ್ಧರು ಹಾಗೂ ದಿವ್ಯಾಂಗರಿಗೆ ಹೆಚ್ಚಿನ ಸಹಾಯವಾಗಲಿದ್ದು, ಸುಲಭ ಸಂಚಾರ ಮತ್ತು ಪ್ರವೇಶ ಸೌಲಭ್ಯವನ್ನು ಒದಗಿಸಲಿವೆ. ಕುಡಿಯುವ ನೀರಿನ ಮಡಕೆಗಳು ಮೂಲಭೂತ ಸೌಲಭ್ಯಗಳನ್ನು ಹೆಚ್ಚಿಸಲು ಮತ್ತು ಪ್ರಯಾಣಿಕರಿಗೆ ಶುದ್ಧ ಕುಡಿಯುವ ನೀರಿನ ಸೌಲಭ್ಯವನ್ನು ಒದಗಿಸಿದಂತಾಗುವುದು.

ಇದರಿಂದಾಗಿ ಎರಡೂ ಸಂಸ್ಥೆಗಳ ಸಾಮಾಜಿಕ ಜವಾಬ್ದಾರಿ ಮತ್ತು ಸಮುದಾಯ ಸೇವೆಯ ಪ್ರತಿಬದ್ಧತೆಯನ್ನು ಪ್ರತಿಬಿಂಬಿಸುತ್ತದೆ. ಈ ಕೊಡುಗೆ ಪ್ರಯಾಣಿಕರ ಸೌಕರ್ಯ ಮತ್ತು ಒಟ್ಟಾರೆ ಸೇವಾ ಮಟ್ಟವನ್ನು ಉತ್ತಮಗೊಳಿಸುವ ನಿರೀಕ್ಷೆಯಿದೆ.
ಈ ಕಾರ್ಯಕ್ರಮದಲ್ಲಿ ಮೈಸೂರು ವಿಭಾಗದ ಡಿಆರ್ಎಂ ಶ್ರೀ ಮುದಿತ್ ಮಿತ್ತಲ್, ಎಡಿಆರ್ಎಂ ಶ್ರೀ ಶಮ್ಮಾಸ್ ಹಮೀದ್, ಹಿರಿಯ ವಿಭಾಗೀಯ ವಾಣಿಜ್ಯ ವ್ಯವಸ್ಥಾಪಕ ಶ್ರೀ ಲೋಹಿತೇಶ್ವರ ಜೆ, ZRUCC ಮತ್ತು DRUCC ಸದಸ್ಯರು ಹಾಗೂ ಶಾಖಾಧಿಕಾರಿಗಳು ಭಾಗವಹಿಸಿದ್ದರು.
ಅಧಿಕಾರಿಗಳು ಮೈಸೂರು ವಾಣಿಜ್ಯ ಮಂಡಳಿ ಮತ್ತು ಜೈನ್ ಮಿಲನ್ ಚಾರಿಟೇಬಲ್ ಟ್ರಸ್ಟ್ ಅವರಿಗೆ ಅವರ ಉದಾರ ಸಹಕಾರ ಮತ್ತು ಅರ್ಥಪೂರ್ಣ ಕೊಡುಗೆಗಾಗಿ ಕೃತಜ್ಞತೆಗಳನ್ನು ಸಲ್ಲಿಸಿದರು.