ಪಡುವಾರಹಳ್ಳಿಯಲ್ಲಿ ಕುವೆಂಪು ಜಯಂತಿ ಆಚರಣ
1 min read
ಮೈಸೂರು: ನಗರದ ಪಡುವಾರಹಳ್ಳಿಯ ವಾಲ್ಮೀಕಿ ರಸ್ತೆಯ ನಾಮಫಲಕದ ಬಳಿ ವಿಶ್ವಮಾನವ, ಕನ್ನಡದ ಸರ್ವಶ್ರೇಷ್ಠ ರಾಷ್ಟ್ರಕವಿ ಕುವೆಂಪು ಅವರ ಜನ್ಮದಿನಾಚರಣೆ ಆಚರಿಸಲಾಯಿತು.
ಮಾಜಿ ಶಾಸಕರು ನಗರ ಬಿಜೆಪಿ ಅದ್ಯಕ್ಷರಾದ ಎಲ್ ನಾಗೇಂದ್ರ ರವರು ಕುವೆಂಪು ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಮಾತನಾಡಿ ಕುವೆಂಪು ನಮ್ಮ ಕನ್ನಡ ನಾಡಿನ ಸಾಹಿತ್ಯ ಲೋಕದ ಹೆಮ್ಮೆ ಅವರಿಗೆ ಕೋಟಿ ಕೋಟಿ ನಮನಗಳು. ಕನ್ನಡಕ್ಕೆ ಮೊದಲ ಜ್ಞಾನಪೀಠ ಪ್ರಶಸ್ತಿಯನ್ನು ತಂದುಕೊಟ್ಟ ಮಹಾನ್ ಕವಿ, ತಮ್ಮ ಸಾಹಿತ್ಯದಿಂದ ಕನ್ನಡಿಗರ ಮನಗಳಲ್ಲಿ ಶಾಶ್ವತ ಸ್ಥಾನ ಪಡೆದಿದ್ದಾರೆ ಅವರ ಮಲೆಗಳಕ್ಲು ಮದುಮಗಳು ಕಾನೂರು ಹೆಗ್ಗಡತಿ ಅಂತಹ ಕಾದಂಬರಿಗಳು, ಶ್ರೀ ರಾಮಾಯಣ ದರ್ಶನಂ ಮಹಾಕಾವ್ಯ ಹೀಗೆ ಹತ್ತು ಹಲವು ಬರಹಗಳು ಅವರನ್ನು ಕರ್ನಾಟಕ ಸರ್ಕಾರದ ಅತ್ಯುನ್ನತ ನಾಗರಿಕ ಪ್ರಶಸ್ತಿಗಳಾದ ಕರ್ನಾಟಕ ರತ್ನ, ಪಂಪ ಪ್ರಶಸ್ತಿ ಪಡೆದ ಮೊದಲಿಗರು ಇವರು ಮೈಸೂರು ಕುಲಪತಿಗಳಾಗಿ ಮಾನಸ ಗಂಗೋತ್ರಿ ಕಟ್ಟಿ ಸ್ನಾತಕೋತ್ತರ ಪದವಿ ಕೇಂದ್ರದ ಮೂಲಕ ಲಕ್ಷಾಂತರ ವಿದ್ಯಾರ್ಥಿಗಳು ಇಂದಿಗೂ ಶೈಕ್ಷಣಿಕ ಸಾಮಾಜಿಕ ಸಾಂಸ್ಕೃತಿಕ ಪ್ರಗತಿಯ ಜೊತೆಗೆ ಸಮಾಜದ ಅಭಿವೃದ್ಧಿಯ ಪಾಲುದಾರಿಕೆ ಮಾಡಿದ್ದು ನಮಗೆಲ್ಲಾ ಹೆಮ್ಮೆಯಿಂದ ರಾಜ್ಯದಲ್ಲಿ ಚಿರಸ್ಥಾಯಿಯಾಗಿ ಇದ್ದಾರೆ. “ಎಲ್ಲಾದರು ಇರು, ಎಂಥಾದರು ಇರು ಎಂದೆಂದಿಗೂ ನೀ ಕನ್ನಡವಾಗಿರು” ಎಂಬ ಅವರ ಸಂದೇಶ ಸದಾ ಪ್ರೇರಣೆಯಾಗಿದೆ. ರಾಷ್ಟ್ರಕವಿ ಕುವೆಂಪು ಅವರ ಜನ್ಮದಿನದಂದು ಅವರನ್ನು ಮನಃಪೂರ್ವಕವಾಗಿ ಗೌರವಿಸುವುದು ನಮ್ಮ ಜವಾಬ್ದಾರಿ ಎಂದರು.

ಈ ಸಂಧರ್ಭದಲ್ಲಿ ಹಿರಿಯ ಸಹಕಾರಿ ಶ್ರೀ ಕೆ ಉಮಾಶಂಕರ್, ಪಡುವಾರಹಳ್ಳಿ ಗ್ರಾಮಾಭ್ಯುದಯ ಟ್ರಸ್ಟ್ ಕಾರ್ಯದರ್ಶಿ ಎಂ ಭೈರಪ್ಪ, ದಿ ಮೈಸೂರು ಕೋ ಆಪರೇಟಿವ್ ಬ್ಯಾಂಕ್ ನಿರ್ದೇಶಕ ಪಡುವಾರಹಳ್ಳಿ ಎಂ ರಾಮಕೃಷ್ಣ, ಮಾಜಿ ನಗರಪಾಲಿಕೆ ಸದಸ್ಯರಾದ ಎಂ ಚಿಕ್ಕವೆಂಕಟು,ಗುರುವಿನಾಯಕ,,ನಗರ ಬಿಜೆಪಿ ಉಪಾಧ್ಯಕ್ಷ ಸೋಮಶೇಖರ ರಾಜು ,ಕಾರ್ಯದರ್ಶಿಗಳಾದ ಇ.ರಮೇಶ್, ಪುನೀತ್, ಮರಿಸ್ವಾಮಿನಾಯಕ, ಸಿ.ಡಿ.ಕುಮಾರ್, ಕೇಬಲ್ ಕಿಟ್ಟಿ,ವಿ.ಮಧು,,ಕೆ. ಗಿರೀಶ್,ವೇಣು,ಗವಿ, ಸಿ.ಸಂತೋಷ್, ರಾಘವ್ ಗೌಡ, ಕೇಬಲ್ ವಿಜಿ ವೆಂಕಟೇಶ,ಸಚಿನ್ ಗೌಡ, ಬೋಟಿ ಬಜಾರ್ ಯೋಗಿ,ಗೋಪಿ,ಪುಷ್ಣ ಗೌಡ,ಎಲ್ ಜಗದೀಶ್, ಧನರಾಜ್, ಕುಂಬಾರಕೊಪ್ಪಲ್ ಆರ್ ಲೋಕೇಶ್,ಈ.ಬಸವರಾಜು,,ಗೋಕುಲಂ ನಾಗ,ಕಿರಣ್,ಎಸ್ ಟಿ ಮೋರ್ಚಾ ಕೃಷ್ಣನಾಯಕ,ಎಂ ಕೆ ಶಿವಕುಮಾರ್, ಎಂ ಕೆ ಕಿಶೋರ್ ಕುಮಾರ್,ಫೋಟೋ ನಾಗೇಶ್ ಮತ್ತಿತರಿದ್ದರು.