ಸದನದಲ್ಲಿ ರೋಹಿಣಿ ಸಿಂಧೂರಿ ವಿರುದ್ಧ ಹಕ್ಕುಚ್ಯುತಿ ಮಂಡಿಸಿದ ಸಾ.ರಾ.ಮಹೇಶ್

ಬೆಂಗಳೂರು/ಮೈಸೂರು, ಸೆ.21- ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿ  ಅವರ ವಿರುದ್ಧ ಜೆಡಿಎಸ್ ಶಾಸಕ ಸಾ.ರಾ ಮಹೇಶ್ ಇಂದು ಸದನದಲ್ಲಿ ಹಕ್ಕು ಚ್ಯುತಿಯನ್ನು ಮಂಡಿಸಿದ್ದಾರೆ.
ರೋಹಿಣಿ ಸಿಂಧೂರಿ ವಿರುದ್ಧ ಬಟ್ಟೆ ಬ್ಯಾಗ್ ಖರೀದಿಯಲ್ಲಿ ಅಕ್ರಮ ಆರೋಪ ಮಾಡಿ ಆಕ್ರೋಶ ಹೊರ ಹಾಕಿದ್ದ ಸಾ.ರಾ.ಮಹೇಶ್ ಸದನದಲ್ಲಿ ಹಕ್ಕು ಚ್ಯುತಿಯನ್ನು ಮಂಡಿಸಿದ್ದಾರೆ.
ಹಕ್ಕು ಚ್ಯುತಿ ಮಂಡಿಸಿ ಮಾತನಾಡಿದ ಅವರು,ರೋಹಿಣಿ ಸಿಂಧೂರಿ ಅವರು 30 ಲಕ್ಷಕ್ಕೆ ಈಜು ಕೊಳ ಮಾಡಿಸಿಕೊಂಡಿದ್ದರು.  15 ಲಕ್ಷಕ್ಕೆ ಕಚೇರಿ ನವೀಕರಣ ಮಾಡಿಸಿಕೊಂಡಿದ್ದರು ಎಂದು ಸದನದಲ್ಲಿಯೇ ಪೋಟೋ ಜೊತೆಗೆ ಬಟ್ಟೆ ಬ್ಯಾಗ್  ಪ್ರದರ್ಶಿಸಿದರು.

About Author

Leave a Reply

Your email address will not be published. Required fields are marked *