ಮೈಸೂರು : ಅ.1ಕ್ಕೆ ಅರಮನೆಯಲ್ಲಿ ಸಿಂಹಾಸನ ಜೋಡಣೆ!
ವಿಶ್ವ ವಿಖ್ಯಾತ ಮೈಸೂರು ದಸರಾ ಕಳೆಗಟ್ಟಿದ್ದು ಇತ್ತ ಅರಮನೆಯಲ್ಲು ಖಾಸಗಿ ದಸರಾದ ವೈಭವ ಮೇಳೈಸಲಿದೆ. ರಾಜವಂಶಸ್ಥರ ಸಂಪ್ರದಾಯಿಕವಾಗಿ ನಡೆದು ಬಂದ ಖಾಸಗಿ ದಸರಾಗೆ ಅಕ್ಟೋಬರ್ 1ಕ್ಕೆ ಸಿಂಹಾಸನ ಜೋಡಣಾ ಕಾರ್ಯ ನಡೆಯಲಿದ್ದು, ಇದು ಸಂಪ್ರದಾಯಿಕ ದಸರೆಯ ಮಹತ್ವದ್ದಾಗಿದೆ.

ಸಿಂಹಾಸನ ಜೋಡಣೆ ಕಾರ್ಯದ ಮೂಲಕ ಅಧಿಕೃತ ಚಾಲನೆ ಸಿಗಲಿದ್ದು, ಅಕ್ಟೋಬರ್ 1 ಶುಕ್ರವಾರ ಅಭಿಜಿತ್ ಲಗ್ನದಲ್ಲಿ ಸಿಂಹಾಸನ ಜೋಡಣೆ ಕಾರ್ಯ ನಡೆಯಲಿದ್ದು, ಅದಕ್ಕು ಮುನ್ನ ಹೋಮ ಹವನ ನಡೆಯಲಿದೆ. ಇನ್ನು ಖಾಸಗಿ ದರ್ಬಾರ್ ಹಾಲ್ ನಲ್ಲಿ ಈ ಜೋಡಣೆ ಕಾರ್ಯ ನಡೆಯಲಿದ್ದು, ಪ್ರವಾಸಿಗರಿಗೆ, ಸಾರ್ವಜನಿಕರಿಗೆ ಅಂದು ಅರಮನೆ ಪ್ರವೇಶ ನಿರ್ಬಂಧ ಹೇರಲಾಗಿದೆ.