ಗುಜರಾತ್ಗೆ ಅರಮನೆ ಆನೆ ಶಿಫ್ಟ್ ವಿಚಾರ’ ಆನೆಗಳಿಗೆ ಆರೋಗ್ಯ ತಪಾಸಣೆ!
1 min read
ಮೈಸೂರು ಅರಮನೆ ಆನೆಗಳ ಗುಜರಾತ್ ರಾಜ್ಯಕ್ಕೆ ಕಳಿಸುವ ವಿಚಾರಕ್ಕೆ ಸಂಬಂಧಿಸಿದಂತೆ ಮೈಸೂರಿನಲ್ಲಿ ಡಿಸಿಎಫ್ ಕರಿಕಾಳನ್ ಪ್ರತಿಕ್ರಿಯೆ ನೀಡಿದ್ದಾರೆ. ಈಗಾಗಲೇ ನಮಗೆ ವೈಲ್ಡ್ ಲೈಫ್ ಚೀಫ್ ರಿಂದ ನಮಗೆ ಪತ್ರ ಬಂದಿದ್ದು, ಅವರ ಸೂಚನೆಯಂತೆ ನಾವು 6 ಆನೆಗಳ ಪೈಕಿ 4 ಆನೆಗಳನ್ನು ಗುಜರಾತ್ಗೆ ಕಳಿಸಬೇಕಿದೆ. ಇನ್ನೊಂದು ವಾರದಲ್ಲಿ ಆನೆಗಳ ಆರೋಗ್ಯ ತಪಾಸಣೆ ಮಾಡಿ ವರದಿ ಸಲ್ಲಿಸುವಂತೆ ಸೂಚಿಸಿದ್ದಾರೆ. ಹಾಗಾಗಿ ಇನ್ನೋಂದು ವಾರದಲ್ಲಿ ಆನೆಗಳ ವೈದ್ಯಕೀಯ ತಪಾಸಣೆ ನಡೆಸಿ ವರದಿ ಸಲ್ಲಿಸಲಾಗುವುದು ಎಂದು ಮಾಹಿತಿ ನೀಡಿದ್ದಾರೆ.

ವೈಲ್ಡ್ ಲೈಫ್ ಚೀಫ್ ಅವರ ನಿರ್ದೇಶನದ ಮೇರೆಗೆ ನಾವು ಮುಂದಿನ ಕ್ರಮ ಕೈಗೊಳ್ಳಲಾಗಿದ್ದು, ಗುಜರಾತ್ವರೆಗೆ ಈ ಆನೆಗಳನ್ನ ಕೊಂಡೊಯ್ಯುವುದು ಒಂದು ದೊಡ್ಡ ಟಾಸ್ಕ್ ಆಗಿದೆ ಎಂದ್ರು. ಇನ್ನು ಸುಮಾರು ಎರಡರಿಂದ ಮೂರು ಸಾವಿರ ದೂರ ಪ್ರಯಾಣ ಅಂದ್ರೆ ಸಾಕಷ್ಟು ಹೆಚ್ಚರಿಕೆ ವಹಿಸಬೇಕಾಗುತ್ತದೆ.
ಸ್ಟಾಂಡರ್ಡ್ ಆಪರೇಟಿಂಗ್ ಪ್ರೋಸಿಜರ್ಸ್ ಮೂಲಕವೇ ಆನೆಗಳನ್ನ ಸಾಗಿಸಬೇಕಾಗುತ್ತದೆ. ಆ ವೇಳೆ ಆನೆಗಳ ಆಹಾರ, ಆರೋಗ್ಯ, ಎಲ್ಲವನ್ನೂ ಗಮನದಲ್ಲಿಟ್ಟುಕೊಂಡು ಸಾಗಣೆ ಮಾಡಲಾಗುತ್ತದೆ ಎಂದು ಮೈಸೂರಿನಲ್ಲಿ ಡಿಸಿಎಫ್ ಕರಿಕಾಳನ್ ಮಾಹಿತಿ ನೀಡಿದ್ದಾರೆ.