ಅರಮನೆ ಒಳ ಆವರಣದಲ್ಲಿ ಧಾರ್ಮಿಕ ಪೂಜೆ: ಪ್ರವಾಸಿಗರ ಪ್ರವೇಶಕ್ಕೆ ನಿರ್ಬಂಧ
ಮೈಸೂರು : ಸೆ.27/ ದಸರಾ ಮಹೋತ್ಸವ ಹಿನ್ನೆಲೆಯಲ್ಲಿ ಮೈಸೂರು ಅರಮನೆ ಒಳ ಆವರಣದಲ್ಲಿ ರಾಜಮನೆತನದವರು ಧಾರ್ಮಿಕ ಪೂಜಾ ಕೈಂಕರ್ಯಗಳನ್ನು ನಡೆಸುವುದರಿಂದ ಅಕ್ಟೋಬರ್ 1, 7, 14, 15, 31 ರಂದು ಅರಮನೆ ವೀಕ್ಷಣೆಗೆ ಪ್ರವಾಸಿಗರ ಪ್ರವೇಶವನ್ನು ನಿರ್ಬಂಧಿಸಲಾಗಿದೆ ಎಂದು ಮೈಸೂರು ಅರಮನೆ ಮಂಡಳಿಯ ಉಪನಿರ್ದೇಶಕರು ತಿಳಿಸಿದ್ದಾರೆ.

ಅ.1 ರಂದು ಶುಕ್ರವಾರ ಸಿಂಹಾಸನ ಜೋಡಣೆ ಪ್ರಯುಕ್ತ
ಬೆಳಿಗ್ಗೆ 10ರಿಂದ ಮಧ್ಯಾಹ್ನ 1ರವರೆಗೆ ಪ್ರವೇಶವಿರುವುದಿಲ್ಲ.
ಅ.7ರಂದು ಗುರುವಾರ ಖಾಸಗಿ ದರ್ಬಾರಲ್ಲಿ ರಾಜವಂಶಸ್ಥರ ಧಾರ್ಮಿಕ ಪೂಜೆಯ ಪ್ರಯುಕ್ತ ಬೆಳಿಗ್ಗೆ 10 ರಿಂದ ಮಧ್ಯಾಹ್ನ 2 ರವರೆಗೆ ಪ್ರವೇಶವಿರುವುದಿಲ.

ಅ.14ರಂದು ಗುರುವಾರ ಆಯುಧ ಪೂಜೆ ಪ್ರಯುಕ್ತ ಬೆಳಿಗ್ಗೆ 10 ರಿಂದ ಮಧ್ಯಾಹ್ನ 2 ರವರೆಗೆ ಪ್ರವೇಶವಿರುವುದಿಲ್ಲ. ಅ.15ರಂದು ಶುಕ್ರವಾರ ವಿಜಯದಶಮಿಯ ಪ್ರಯುಕ್ತ ಸಂಪೂರ್ಣ ದಿನ ಪ್ರವೇಶವಿರುವುದಿಲ್ಲ. ಅ.31ರಂದು ಬೆಳಿಗ್ಗೆ 10 ರಿಂದ ಮಧ್ಯಾಹ್ನ 1ರ ವರೆಗೆ ಸಿಂಹಾಸನ ವಿಸರ್ಜನೆ ಪ್ರಯುಕ್ತ ಸಾರ್ವಜನಿಕರ ಪ್ರವೇಶವನ್ನು
ನಿರ್ಬಂಧಿಸಲಾಗಿದೆ ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.