ಬೆಂಗಳೂರಿಗೆ ಆಗಮಿಸಿದ ಪುನೀತ್ ಪುತ್ರಿ ಧೃತಿ!
ವಿದೇಶದಿಂದ ಪುನೀತ್ ರಾಜಕುಮಾರ್ ಮಗಳು ಧೃತಿ ಬೆಂಗಳೂರಿಗೆ ಆಗಮಿಸಿದ್ದಾರೆ. ದೆಹಲಿಯಿಂದ ಬೆಂಗಳೂರಿನ ಕೆಂಪೇಗೌಡ ಏರ್ ಪೋರ್ಟ್ಗೆ ಆಗಮಿಸಿದ ಅವರಿಗೆ ಪೊಲೀಸ್ ಭದ್ರತೆಯಲ್ಲಿ ಕಂಠೀರವ ಕ್ರೀಡಾಂಗಣದತ್ತ ಕರೆತರಲಾಗ್ತಿದೆ. ಕೆಲವೇ ಕ್ಷಣಗಳಲ್ಲಿ ಪುನೀತ್ ರಾಜ್ ಕುಮಾರ್ ಅವರ ಅಂತಿಮ ದರ್ಶನ ಪಡೆಯಲಿದ್ದಾರೆ ಪುತ್ರಿ ಧೃತಿ.