ಪಠ್ಯ ಪುಸ್ತಕದಲ್ಲಿ ಅಪ್ಪು ಅಂಕಲ್ ಪಾಠ ಸೇರಿಸಿ ಪ್ಲೀಸ್!

ನಟ ಪುನೀತ್ ರಾಜಕುಮಾರ್ ಹೆಸರನ್ನು ಕನ್ನಡ ಪಠ್ಯ ಪುಸ್ತಕಕ್ಕೆ ಸೇರಿಸಬೇಕೆಂದು ದೊಡ್ಡ ಮಟ್ಟದ ಸಹಿ ಸಂಗ್ರಹ ಅಭಿಯಾನ ಆಗಿದೆ. ಟೀ.ನರಸೀಪುರದ ಮುಡುಕುತೊರೆ ಗ್ರಾಮದ ನಿವಾಸಿ ಹಾಗೂ ಪುನೀತ್ ಅಭಿಮಾನಿಯು ಆಗಿರುವ ದೇವರಾಜ್ ಅರಸುರಿಂದ ಈ ಸಹಿ ಸಂಗ್ರಹ ಅಭಿಯಾನ ಆಗಿದೆ.

ಅಪ್ಪು ಬಗ್ಗೆ ಪಠ್ಯ ಪುಸ್ತಕ ಆಗಬೇಕೆಂದು ಒತ್ತಾಯಿಸಿ ಸಹಿ ಸಂಗ್ರಹ

ಈಗಾಗಲೇ ನೂರಾರು ಜನರಿಂದ ಸಹಿ ಸಂಗ್ರಹ ಮಾಡಿಸಿ ಈ ಅಭಿಯಾನದ ಮನವಿಯನ್ನ ಸಿಎಂ ಬಸವರಾಜ್ ಬೊಮ್ಮಾಯಿ ಅವರಿಗೆ ಪತ್ರದ ಮೂಲಕ ಈ ಅಭಿಮಾನಿ ಮನವಿ ಮಾಡಿದ್ದಾರೆ.

ಸಿಎಂಗೆ ಪತ್ರ ಬರೆದು ಮನವಿ

ಪುನೀತ್ ರಾಜಕುಮಾರ್ ಅಪ್ರತಿಮ ನಟ. ಪುನೀತ್ ರಾಜಕುಮಾರ್ ಸರಳತೆ, ಸ್ನೇಹ ಆದರ್ಶ ಹಾಗೂ ಸಾಮಾಜಿಕ ಸೇವೆಗಳು ಮಕ್ಕಳಿಗೆ ಸ್ಫೂರ್ತಿಯಾಗಬೇಕು.

ಮಕ್ಕಳಿಂದ ಹಿಡಿದು ಪೊಲೀಸರು ಕೂಡ ಸಹಿ ಸಂಗ್ರಹದಲ್ಲಿ ಭಾಗಿಯಾಗಿ ಈ ಮನವಿ ಸಲ್ಲಿಸಿದರು.

About Author

Leave a Reply

Your email address will not be published. Required fields are marked *