ಚಳಿಗಾಲದಲ್ಲಿ ತ್ವಚೆಯ ಆರೈಕೆ ಹೇಗೆ? ಇಲ್ಲಿದೆ ಕೆಲವು ಟಿಪ್ಸ್

1 min read

ಚಳಿಗಾಲದಲ್ಲಿ ತ್ವಚೆಯ ಆರೈಕೆ ಬಹು ಮುಖ್ಯ ಹಾಗೂ ಕಷ್ಟಕರ. ಈ ವೇಳೆ ತ್ವಚೆಯ ಆರೈಕೆಯ ಬಗ್ಗೆ ತಾತ್ಸರ ಮಾಡಿದರೆ ಒಣ ಚರ್ಮದ ಸಮಸ್ಯೆ ಕಾಡುವುದು ಖಚಿತ. ತ್ವಚೆಯ ಮಟ್ಟಿಗೆ ಅತಿ ಕೆಟ್ಟ ವಾತಾವರಣವೆಂದರೆ ಚಳಿಗಾಲ. ಈ ಸಮಯದಲ್ಲಿ ತ್ವಚೆಯನ್ನು ರಕ್ಷಿಸಿಕೊಳ್ಳಲು ನಿಮ್ಮ ಆರೈಕೆಯ ಕ್ರಮವೂ ಚಳಿಗಾಲಕ್ಕೆ ಅನುಗುಣವಾಗಿರಬೇಕು.

ಚಳಿಗಾಲದಲ್ಲಿ ಬೆಚ್ಚಗಿರುವುದರ ಜೊತೆಗೆ ತ್ವಚೆಯ ಆರೈಕೆಯನ್ನು ಮಾಡಬೇಕು. ಇಲ್ಲವಾದರೆ ತ್ವಚೆ ಒಣಗಲು ಮತ್ತು ಹೊರಪದರ ಒಣಗಿ ಪೊರೆಯಂತೆ ಸಿಪ್ಪೆಯೇಳಲು ಪ್ರಾರಂಭವಾಗುತ್ತವೆ. ಹೀಗಾಗಿ ಚಳಿಗಾಲದಲ್ಲಿ ತ್ವಚೆಯ ಆರೋಗ್ಯವನ್ನು ಅತ್ಯುತ್ತಮವಾಗಿ ಕಾಪಾಡಿಕೊಳ್ಳುವ ಬಗ್ಗೆ ಹೇಗೆ ಎಂಬ ಬಗ್ಗೆ ಮಾಹಿತಿ ಇಲ್ಲಿದೆ.

ತ್ವಚೆಯ ಆರೈಕೆ ಹೀಗಿರಲಿ:


• ಮೃದು ತ್ವಚೆ ನಿಮ್ಮದಾಗಬೇಕೆಂದರೆ ಹೆಚ್ಚು ನೀರನ್ನು ಕುಡಿಯಬೇಕು. ದಿನವೂ 7-8 ಲೋಟ ನೀರನ್ನು ಸೇವಿಸುವುದರಿಂದ ಚರ್ಮದಲ್ಲಿ ನೀರಿನ ಅಂಶ ಹೆಚ್ಚಾಗಿ ಒಣಗುವಿಕೆಯನ್ನು ತಡೆಯುತ್ತದೆ.
• ಚಳಿಗಾಲದಲ್ಲಿ, ಅತಿ ಹೆಚ್ಚು ಬಾರಿ ಮುಖ ತೊಳೆದುಕೊಳ್ಳದಿರಿ. ಇದು ಚರ್ಮದ ಜೀವಕೋಶಗಳನ್ನು ಸಡಿಲಿಸಿ ಚರ್ಮವನ್ನು ಘಾಸಿಗೊಳಿಸಬಹುದು.


• ತೇವವನ್ನು ಸೆಳೆಯದ ಆಲ್ಕೋಹಾಲ್ ಗಳಿಲ್ಲದ ಸೌಮ್ಯ ಕ್ಲೀನ್ಸರ್ ಗಳನ್ನೇ ಬಳಸಿ.
• ಬಿಸಿನೀರು ಬಳಸದೆ ಉಗುರು ಬೆಚ್ಚನೆಯ ನೀರು ಬಳಸಿ.
• ನೀವು ಬಳಸುವ ಮಿಸ್ಟ್, ಸೀರಂ ಅಥವಾ ಮಾಯಿಶ್ಚರೈಸರ್ ಎಲ್ಲವನ್ನೂ ತೈಲವನ್ನು ಬೆರೆಸಿ ಹಚ್ಚಿಕೊಳ್ಳಿ. ಗಾಳಿಯಿಂದ ತೇವಾಂಶವನ್ನು ಸೆಳೆಯುವ ಹುಮೆಕ್ಟಂಟ್ (humectant) ಮತ್ತು ತ್ವಚೆಯನ್ನು ನಯಗೊಳಿಸುವ ಎಮೋಲಿಯೆಂಟ್ (emollient) ಪ್ರಸಾದನಗಳನ್ನು ಹಚ್ಚುವ ಮುನ್ನ ತ್ವಚೆಗೆ ಕೊಂಚ ಎಣ್ಣೆಯನ್ನು ಸವರಿಕೊಳ್ಳುವುದು ಉತ್ತಮ.
• ಬಿಸಿಲಿಗೆ ಹೋಗುವಾಗ ಕನಿಷ್ಟ ಪ್ರತಿ ಎರಡರಿಂದ ಮೂರು ಘಂಟೆಗಳಿಗೊಮ್ಮೆ ಸನ್ ಸ್ಕ್ರೀನ್ ಧರಿಸಬೇಕು. ಇಲ್ಲದಿದ್ದರೆ ಅತಿನೇರಳೆ ಕಿರಣಗಳು ಚರ್ಮದ ಪ್ರೋಟೀನುಗಳ ಗುಣಮಟ್ಟವನ್ನು ಕಡಿಮೆ ಮಾಡುತ್ತವೆ ಹಾಗೂ ತ್ವಚೆಯನ್ನು ರಕ್ಷಿಸುವ ಗುಣವನ್ನು ಕಳೆದುಕೊಳ್ಳುತ್ತವೆ.
• ಸ್ನಾನಕ್ಕೂ ಮೊದಲು ಚರ್ಮಕ್ಕೆ ಬಿಸಿ ಮಾಡಿದ ತೆಂಗಿನೆಣ್ಣೆ ಹಚ್ಚಿ ಮಸಾಜ್ ಮಾಡಿ. ಇದರಿಂದ ಚರ್ಮ ಒಣುಗುವುದನ್ನು ತಪ್ಪಿಸಬಹುದು. ಅಥವಾ ಸ್ನಾನ ಮಾಡುವಾಗ ನೀರಿಗೆ ಕೆಲವು ಹನಿ ತೆಂಗಿನೆಣ್ಣೆ ಸೇರಿಸಿಕೊಳ್ಳಿ. ಇದರಿಂದ ಸ್ನಾನ ಮಾಡಿದ ಮೇಲೆ ಚರ್ಮ ಒಣಗದಂತೆ ಕಾಪಾಡಿಕೊಳ್ಳಬಹುದು.
• ಚಳಿಗಾಲದಲ್ಲಿ ಅತಿ ಬಿಸಿನೀರು ಸ್ನಾನ ಮಾಡುವುದು ಒಳ್ಳೆಯದಲ್ಲ. ಇದರಿಂದ ದೇಹದಲ್ಲಿರುವ ನೈಸರ್ಗಿಕ ಎಣ್ಣೆ ಅಂಶ ಕಡಿಮೆಯಾಗುತ್ತದೆ
.

ಪುರುಷರ ತ್ವಚೆಯ ಆರೈಕೆ:
• ಮನೆಯಿಂದ ಹೊರಗಡೆ ಹೋಗುವಾಗ ಸನ್ ಸ್ಕ್ರೀನ್ ಹಾಕಿಕೊಳ್ಳುವುದನ್ನು ಮರೆಯದಿರಿ. ಸನ್ ಸ್ಕ್ರೀನ್ ಹಾಕಿಕೊಂಡರೆ ಚರ್ಮದ ಭಾಗದಲ್ಲಿ ತೇವಾಂಶ ಹಾಗೆ ಉಳಿಯುತ್ತದೆ ಮತ್ತು ಚರ್ಮಕ್ಕೆ ಒಂದು ರೀತಿಯ ರಕ್ಷಣೆಯ ಪದರ ಸಿಗುತ್ತದೆ.


• ಸುದೀರ್ಘ ಸ್ನಾನವನ್ನು ಮೊಟಕುಗೊಳಿಸಿ. ಸುದೀರ್ಘ ಸ್ನಾನದಿಂದ ಚರ್ಮ ತನ್ನ ತೈಲಗುಣವನ್ನು ಕಳೆದುಕೊಳ್ಳುತ್ತದೆ. ಇದರಿಂದ ಒಣ ಚರ್ಮದ ಸಮಸ್ಯೆ ಕಾಡುತ್ತದೆ.
• ಸ್ನಾನವಾದ ಬಳಿಕ ಟವಲ್ ನಿಂದ ನಿಧಾನವಾಗಿ ಮೈ ಒರೆಸಿಕೊಳ್ಳಿ. ದೇಹದಲ್ಲಿ ತೇವಾಂಶ ಉಳಿದರೂ ಚಿಂತೆಯಿಲ್ಲ. ಇದು ಚರ್ಮ ಕೋಮಲವಾಗಿ ಉಳಿಯುವಂತೆ ಮಾಡುತ್ತದೆ.


• ಸ್ನಾನದ ನಂತರ ನಿಮ್ಮ ಚರ್ಮಕ್ಕೆ ಹೊಂದುವ ಮಾಯಿಶ್ಚರೈಸರ್ ಅನ್ನು ಪ್ರತಿದಿನ ಲೇಪಿಸುವುದರಿಂದ ಚರ್ಮದ ಕೋಮಲತನ ಸಂರಕ್ಷಿಸುತ್ತದೆ.
• ಮುಖಕ್ಷೌರ ಮಾಡುವ ಮುನ್ನ, ಕ್ರೀಮ್ ಲೋಷನ್ ಅಥವಾ ಜೆಲ್ ಲೇಪಿಸಿಕೊಳ್ಳುವುದು ಉತ್ತಮ. ಸ್ವಚ್ಛ ಮತ್ತು ಹರಿತಾದ ಬ್ಲೇಡು ಬಳಸುವುದರಿಂದಲೂ ಮುಖದ ಚರ್ಮ ಮೃದುವಾಗಿರುತ್ತದೆ.

About Author

Leave a Reply

Your email address will not be published. Required fields are marked *