ಮಹಾಮಳೆಗೆ ಕೆ.ಆರ್.ನಗರದ ಮಂದಿ ಹೈರಾಣು- ಸ್ಥಳಕ್ಕೆ ಭೇಟಿ ನೀಡಿದ ಶಾಸಕ ಸಾರಾ ಮಹೇಶ್.!
ಮೈಸೂರು ಜಿಲ್ಲೆಯ ಕೆ.ಆರ್.ನಗರ ತಾಲೂಕಿನಲ್ಲಿ ಮಳೆಗೆ ಜನರು ಹೈರಾಣಾಗಿದ್ದಾರೆ. ಜೊತೆಯಲ್ಲಿ ಪಕ್ಕದ ಸಾಲಿಗ್ರಾಮ ತಾಲ್ಲೂಕು, ಚುಂಚನಕಟ್ಟೆ ಹೋಬಳಿ, ಹೊಸೂರು ಗ್ರಾಮದಲ್ಲಿ ನಿನ್ನೆ ಸುರಿದ ಭಾರಿ ಮಳೆಯಿಂದಾಗಿ ಮನೆಯೊಳಗೆ ನೀರು ನುಗ್ಗಿ ಸಾಕಷ್ಟು ಹಾನಿಯುಂಟಾಗಿದೆ.

ಇದರಿಂದ ಹಾನಿಯುಂಟಾದ ಸ್ಥಳಗಳಿಗೆ ಇಂದು ಶಾಸಕ ಸಾ. ರಾ. ಮಹೇಶ್ ಭೇಟಿ ನೀಡಿ ಸ್ಥಳ ಪರಿಶೀಲನೆ ನಡೆಸಿದರು. ಅಲ್ಲದೆ ಸಂಕಷ್ಟಕ್ಕೆ ಸಿಲುಕಿದ ಜನರಿಗೆ ಸೂಕ್ತ ವ್ಯವಸ್ಥೆ ಕಲ್ಪಿಸುವಂತೆ ಕ್ರಮ ವಹಿಸಲು ಸಂಬಂಧಿಸಿದ ಅಧಿಕಾರಿಗಳಿಗೆ ಸ್ಥಳದಲ್ಲೇ ಸೂಚಿಸಿದರು.