ಕೃಷಿ ಮಸೂದೆ ರೈತ ಸ್ವಾತಂತ್ರ್ಯದ ಹೋರಾಟಕ್ಕೆ ಸಿಕ್ಕ ಜಯ- ಮಾಜಿ ಶಾಸಕ ಸೋಮಶೇಖರ್!
ಪ್ರಧಾನಮಂತ್ರಿಗಳಾದ ಶ್ರೀ ನರೇಂದ್ರ ಮೋದಿಯವರ ಸರ್ವಾಧಿಕಾರಿ ಧೋರಣೆಗೆ ಮೊಳೆ ಹೊಡೆದು, ರೈತರ ಹೋರಾಟಕ್ಕೆ ಇಂದು ಜಯ ದೊರೆತಿದೆ ಎಂದು ಮಾಜಿ ಶಾಸಕ ಸೋಮಶೇಖರ್ ಹೇಳಿದ್ದಾರೆ. ಮೈಸೂರಿನಲ್ಲಿ ಕೃಷಿ ಕಾಯ್ದೆ ವಾಪಸ್ ಪಡೆದ ಕಾರಣ ಸಂಭ್ರಮಾಚರಣೆ ನಡೆಸಿದ ಸೋಮಶೇಖರ್, ಬಳಿಕ ಮೋದಿ ವಿರುದ್ದ ಕಿಡಿಕಾರಿದರು.
ಕಳೆದ ಒಂದೂವರೆ ವರ್ಷದಿಂದಲೂ ಮಳೆ, ಚಳಿ, ಗಾಳಿ ಹಾಗೂ ಮಹಾಮಾರಿ ಕೊರೊನಾವನ್ನು ಲೆಕ್ಕಿಸದೆ ನಿರಂತರವಾಗಿ ಯಾವುದೇ ಸಂಧಾನಗಳಿಗೆ ಒಪ್ಪದೆ ಇಟ್ಟ ಗುರಿ ದಿಟ್ಟ ಹೆಜ್ಜೆ ಹಿಂದೆ ಇಡದೆ ನಡೆಸಿದ ಛಲಬಿಡದ ಹೋರಾಟದ ಫಲ ಇಂದು ಜಯ ದೊರೆತಿದೆ. ತಮ್ಮ ಪ್ರತಿಷ್ಠೆ ಮತ್ತು ಹಠಮಾರಿತನದಿಂದ ಸಾವಿರಾರು ಜೀವಗಳನ್ನು ಬಲಿ ತೆಗೆದುಕೊಂಡ ಸನ್ಮಾನ್ಯ ನರೇಂದ್ರ ಮೋದಿಯವರಿಗೆ ಇದೊಂದು ದೊಡ್ಡ ಎಚ್ಚರಿಕೆ ಘಂಟೆ ರೈತರಿಂದ ದೊರೆತಿದೆ.

ರೈತರ ಪಾಲಿನ ಮರಣ ಶಾಸನವಾಗಿದ್ದ ಮೂರು ಪ್ರಮುಖ ರೈತಕಾಯ್ದೆಗಳನ್ನು ವಾಪಸ್ಸು ಪಡೆಯುವ ಮೂಲಕ ರೈತರ ಹೋರಾಟಕ್ಕೆ ತಲೆಬಾಗಬೇಕಾದ ಪರಿಸ್ಥಿತಿ ಬಂದೊದಗಿದೆ. ತಮ್ಮ ಕುಟುಂಬ, ತಮ್ಮ ಜೀವಗಳನ್ನು ತ್ಯಾಗಮಾಡಿ ದೇಶದ ಉಳಿವಿಗಾಗಿ ಹಗಲಿರುಳು ನಿರಂತರ ಹೋರಾಟದಲ್ಲಿ ತೊಡಗಿ ರೈತ ಸ್ವಾತಂತ್ರ್ಯ ಹೋರಾಟದಲ್ಲಿ ಜಯ ಸಾಧಿಸಿದ ರೈತ ಬಂಧುಗಳಿಗೆ ಅಭಿನಂದನೆಗಳು.
ಈಗಾಗಲೇ ಪುಲ್ವಾಮ ದಾಳಿ, ನೋಟ್ ಬ್ಯಾನ್, ಪಾಕಿಸ್ತಾನ ತೋರಿಸಿ ಚುನವಣೆ ಎದುರಿಸಿ ದೇಶದ ಜನರನ್ನು ವಂಚಿಸಿ ಬಿಜೆಪಿ ಯವರು ಅಧಿಕಾರಕ್ಕೇರಿದರು. ಇಂದು ಎಲ್ಲವನ್ನೂ ಅರಿತ ಜನ ಬುದ್ಧಿ ಕಲಿಸಲು ತಯಾರಾಗಿರುವುದನ್ನು ಮನಗಂಡು ಮತ್ತು ಉತ್ತರ ಪ್ರದೇಶ ಮತ್ತು ಪಂಜಾಬ್ ಚುನಾವಣೆಗಳನ್ನು ಕಾಯ್ದೆಗಳನ್ನು ವಾಪಸ್ಸು ತೆಗೆಯದೆ ಬೇರೆ ಮಾರ್ಗವಿಲ್ಲದನ್ನು ಅರಿತು ಈ ನಿರ್ಧಾರಕ್ಕೆ ಮೋದಿಯವರು ಬಂದಿದ್ದು ಮತದಾರರನ್ನು ಸೆಳೆಯುವ ತಂತ್ರಗಾರಿಕೆಯೂ ಇದರಲ್ಲೂ ಅಡಗಿದೆ ಎನ್ನುವುದನ್ನು ಅಲ್ಲಗಳೆಯುವಂತಿಲ್ಲ.

–ಹೋರಾಟದಲ್ಲಿ ಭಾಗಿಯಾಗಿ 750ಕ್ಕೂ ಹೆಚ್ಚು ಜನ ಮರಣ ಹೊಂದಿದ್ದಾರೆ ಅವರ ಕುಟುಂಬಗಳಿಗೆ ತಲಾ 25 ಲಕ್ಷ ಪರಿಹಾರ ಕೊಡಬೇಕು, ರೈತರು ಬೆಳೆದ ಬೆಲೆಗಳಿಗೆ ಸೂಕ್ತ ಬೆಂಬಲ ಕೊಡಬೇಕು ಹಾಗೂ ಸಮರ್ಪಕ ರಸಗೊಬ್ಬರ ಪೂರೈಕೆಯಲ್ಲಿ ತಲೆದೂರಿರುವ ಸಮಸ್ಯೆಗಳನ್ನು ಪರಿಹಾರ ಮಾಡಬೇಕು ಎಂದು ಒತ್ತಾಯಿಸಿದ್ದಲ್ಲದೆ ಮೈಸೂರಿನ ರಾಮಸ್ವಾಮಿ ವೃತ್ತದಲ್ಲಿ ರೈತರಿಗೆ ಸಿಹಿ ಹಂಚಿ ಸಂಭ್ರಮಾಚರಣೆ ಆಚರಿಸಲಾಯಿತು. ಇದೇ ವೇಳೆ ರಾಷ್ಟ್ರಾದ್ಯಂತ ರೈತರ ನಿರಂತರ ಹೋರಾಟದ ಜೊತೆಜೊತೆಗೆ ಕೈ ಜೋಡಿಸಿ ಇಂದಿನ ಯಶಸ್ಸಿಗೆ ಕಾರಣೀಭೂತರಾಗಿರುವ ನಮ್ಮ ನೆಚ್ಚಿನ ನಾಯಕಿಯಾದ ಶ್ರೀಮತಿ ಸೋನಿಯಾಗಾಂಧಿ,ಪ್ರಿಯಾಂಕ ಗಾಂಧಿ,ನಾಯಕರಾದ ರಾಹುಲ್ ಗಾಂಧಿ ಹಾಗೂ ರಾಷ್ಟ್ರ ರಾಜ್ಯ ಕಾಂಗ್ರೆಸ್ ನಾಯಕರು,ಸಮಸ್ತ ಕಾಂಗ್ರೆಸ್ ಕಾರ್ಯಕರ್ತ ಬಂಧುಗಳಿಗೆ ಅಭಿನಂದನೆಗಳನ್ನು ಸಮರ್ಪಿಸುತ್ತೇನೆ ಎಂದರು.

ಈ ವೇಳೆ ನಗರಾಧ್ಯಕ್ಷರಾದ ಆರ್ ಮೂರ್ತಿ, ಜಿಲ್ಲಾಧ್ಯಕ್ಷರಾದ ಡಾ.ಬಿ.ಜೆ.ವಿಜಯ್ ಕುಮಾರ್, ಬ್ಲಾಕ್ ಕಾಂಗ್ರೆಸ್ ಸಮಿತಿ ಅಧ್ಯಕ್ಷರಾದ ಜಿ ಸೋಮಶೇಖರ್, ಶ್ರೀಧರ್,ಕೆಪಿಸಿಸಿ ಸದಸ್ಯರಾದ ವೀಣಾ, ಭಾಸ್ಕರ್, ಶ್ರೀನಾಥ್ ಬಾಬು, ಪಾಲಿಕೆ ಸದಸ್ಯ ಜೆ ಗೋಪಿ,ಮಾಜಿ ಸದಸ್ಯ ಎಂ ಸುನೀಲ್, ಕಾಂಗ್ರೆಸ್ ಮುಖಂಡರ್ ಹೆಚ್ ಶೇಖರ್, ಪಾಪು(ಸುರೇಶ್), ಆನಂದ್, ಶಂಕರ್, ಫಾರುಖ್, ಗುಣಶೇಖರ್, ವಿಜಯ್ ಕುಮಾರ್, ಭವ್ಯ, ಡೈರಿ ವೆಂಕಟೇಶ್, ಕುಮಾರ್ (ಕುಮ್ಮಿ), ರೇಣು, ಧರ್ಮ, ಚಿಕ್ಕಲಿಂಗು, ಲೋಕೇಶ್ ಕುಮಾರ್, ಎನ್ಎಸ್‌ಯುಐ ರಜತ್ ಮತ್ತಿತರರು ಉಪಸ್ಥಿತರಿದ್ದರು.