ಹಿರಿಯ ನಟ ಶಿವರಾಂ ಇನ್ನಿಲ್ಲ!
ಕನ್ನಡ ಚಿತ್ರರಂಗಕ್ಕೆ ಇದೀಗಾ ಮತ್ತೊಂದು ಶಾಕ್ ಆಗಿದ್ದು, ಹಿರಿಯ ನಟ ಶಿವರಾಂ ನಿಧನರಾಗಿದ್ದಾರೆ. ಕೇವಲ 35 ದಿನಗಳ ಅಂತರದಲ್ಲಿ ಇಬ್ಬರು ನಟರನ್ನ ಕನ್ನಡ ಚಿತ್ರರಂಗ ಕಳೆದುಕೊಂಡಿದೆ. ಹೌದು, ಕಳೆದ ನಾಲ್ಕೈದು ದಿನಗಳಿಂದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ 83 ವರ್ಷದ ಶಿವರಾಂ ಅವರು ಇಂದು ಚಿಕಿತ್ಸೆ ಫಲಿಸದೆ ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ. ಹಿರಿಯ ಚೇತನವನ್ನ ಕಳೆದುಕೊಂಡು ಇಡೀ ಸ್ಯಾಂಡಲ್ ವುಡ್ ಕಂಬನಿ ಮಿಡಿದಿದೆ.