3ನೇ ಅಲೆ ಆತಂಕ- ರಾಷ್ಟ್ರೀಯ ಬಹುರೂಪಿ ರಾಷ್ಟ್ರೀಯ ನಾಟಕೋತ್ಸವ ಮುಂದೂಡಿಕೆ!
ಮೈಸೂರು : ಸರ್ಕಾರದಿಂದ ಕೋವಿಡ್ ಹೊಸ ಮಾರ್ಗಸೂಚಿ ಹಿನ್ನೆಲೆ ಪ್ರತಿಷ್ಠಿತ ಮೈಸೂರಿನ ರಂಗಾಯಣದಲ್ಲಿ ನಡೆಯಬೇಕಿದ್ದ ಬಹುರೂಪಿ ರಾಷ್ಟ್ರಿಯ ನಾಟಕೋತ್ಸವ ಮುಂದೂಡಿಕೆಯಾಗಿದೆ. ಇದೇ ಡಿ.10ರಿಂದ 19ರವರೆಗೆ ನಡೆಯಬೇಕಿದ್ದ ರಾಷ್ಟ್ರೀಯ ನಾಟಕೋತ್ಸವವನ್ನ 3ನೇ ಅಲೆಯ ಆತಂಕ ಹಾಗೂ ಸರ್ಕಾರದ ಮಾರ್ಗಸೂಚಿ ಅನ್ವಯ ಮುಂದೂಡಿಕೆ ಮಾಡಲಾಗಿದೆ.

ಕಳೆದ 2 ವರ್ಷಗಳಿಂದ ರಂಗಾಯಣದ ಕಾರ್ಯಕ್ರಮಗಳು ಸ್ಥಗಿತಗೊಂಡಿದ್ದು, ಯಾವುದೇ ಕಾರ್ಯಕ್ರಮಗಳಿಲ್ಲದೆ ಕಲಾವಿದರು ಹೈರಾಣಾಗಿದ್ದರು. ಆದರೆ ಈ ಬಾರಿಯ ಬಹುರೂಪಿ ನಾಟಕೋತ್ಸವಕ್ಕೆ ಸಕಲ ತಯಾರಿಕೂಡ ನಡೆದಿತ್ತು. ಆದರೆ 3ನೇ ಅಲೆಯ ಭೀತಿಯಿಂದ 500 ಮಂದಿಗೆ ಮಾತ್ರ ಅವಕಾಶ ನೀಡಿದ ಕಾರಣ, ಕಲಾವಿದರ ಸಂಖ್ಯೆಯೇ 400ಕ್ಕೂ ಹೆಚ್ಚಿರುವ ಕಾರಣದಿಂದಾಗಿ ಕಾರ್ಯಕ್ರಮ ಹೇಗೆ ನಡೆಸಲಾಗುವುದು ಎಂಬ ಗೊಂದಲದಲ್ಲಿ ರಂಗಾಯಣ ಇದೆ. ಇದರಿಂದ ಜನವರಿ 15ರ ನಂತರ ಬಹುರೂಪಿ ನಾಟಕೋತ್ಸವ ನಡೆಸಲು ತೀರ್ಮಾನ ಮಾಡಲಾಗಿದೆ.