ನಾಳೆಯಿಂದ ಚಂದನ ವಾಹಿನಿಯಲ್ಲಿ `ಸಂವೇದ- ಇ ಕಲಿಕಾ’ ಕಾರ್ಯಕ್ರಮ

1 min read

ಬೆಂಗಳೂರು,ಜ.12-ನಾಳೆಯಿಂದ ದೂರದರ್ಶನ ಚಂದನ ವಾಹಿನಿಯಲ್ಲಿ 5ರಿಂದ 9ನೇ ತರಗತಿ ವರೆಗಿನ ಮಕ್ಕಳಿಗೆ `ಸಂವೇದ- ಇ ಕಲಿಕಾ’ ಕಾರ್ಯಕ್ರಮ ಆರಂಭವಾಗಲಿದೆ.
ರಾಜ್ಯದಲ್ಲಿ ಕೋವಿಡ್ ಸೋಂಕಿನ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಬೆಂಗಳೂರು ನಗರ ಮತ್ತು ಬೆಳಗಾವಿ ಜಿಲ್ಲೆಯಲ್ಲಿ 1ರಿಂದ 9ನೇ ತರಗತಿಗಳಿಗೆ ಭೌತಿಕ ತರಗತಿಗಳನ್ನು ಸ್ಥಗಿತಗೊಳಿಸಲಾಗಿದೆ. ಇದರಿಂದ ಮಕ್ಕಳು ಕಲಿಕೆಯಲ್ಲಿ ಹಿಂದುಳಿಯಬಾರದು ಮತ್ತು ಕಲಿಕೆಗೆ ತೊಂದರೆಯಾಗಬಾರದು ಎಂಬ ಉದ್ದೇಶದಿಂದ ಸಂವೇದ- ಇ ಕಲಿಕಾ ಕಾರ್ಯಕ್ರಮವನ್ನು ಆರಂಭಿಸಲಾಗಿದೆ.
ಸೋಮವಾರದಿಂದ ಶುಕ್ರವಾರದವರೆಗೆ ವಾರದಲ್ಲಿ 5 ದಿನ ಬೆಳಗ್ಗೆ 8ರಿಂದ ಸಂಜೆ 6ರ ವರೆಗೆ ಪ್ರಸಾರ ಮಾಡಲಾಗುತ್ತದೆ. ತರಗತಿವಾರು ಮತ್ತು ವಿಷಯವಾರು ವೇಳಾಪಟ್ಟಿಯನ್ನು ಪ್ರತಿವಾರ ರಾಜ್ಯ ಶಿಕ್ಷಣ ಸಂಶೋಧನೆ ಮತ್ತು ತರಬೇತಿ ಇಲಾಖೆ (ಡಿಎಸ್ಇಆರ್ಟಿ) ಪ್ರಕಟಿಸಲಿದೆ ಎಂದು ನಿರ್ದೇಶಕಿ ವಿ. ಸುಮಂಗಲ ತಿಳಿಸಿದ್ದಾರೆ.
ಕಲಿಕಾ ಕಾರ್ಯಕ್ರಮ ವೇಳಾಪಟ್ಟಿ:
ವಾರ 8ರಿಂದ 8.30, 8.30ರಿಂದ 9, 9ರಿಂದ9.30, 9.30ರಿಂದ10, 3ರಿಂದ 3.30, 3.30ರಿಂದ 4, 4ರಿಂದ 4.30, 5ರಿಂದ 5.30, 5.30ರಿಂದ 6.
ಜ.13 ಗುರುವಾರ 9ನೇ ತರಗತಿ ಗಣಿತ 9ನೇ ತರಗತಿ ಸಮಾಜ ವಿಜ್ಞಾನ 8ನೇ ತರಗತಿ ಕನ್ನಡ 8ನೇ ತರಗತಿ ಗಣಿತ 5ನೇ ತರಗತಿ ಕನ್ನಡ 6ನೇ ತರಗತಿ ಗಣಿತ 6ನೇ ತರಗತಿ ಸಮಾಜ ವಿಜ್ಞಾನ 7ನೇ ತರಗತಿ ಗಣಿತ 7ನೇ ತರಗತಿ ಹಿಂದಿ.
ಜ.14 ಶುಕ್ರವಾರ 9ನೇ ತರಗತಿ ಕನ್ನಡ 9ನೇ ತರಗತಿ ಗಣಿತ 8ನೇ ತರಗತಿ ಸಮಾಜ ವಿಜ್ಞಾನ 8ನೇ ತರಗತಿ ವಿಜ್ಞಾನ 5ನೇ ತರಗತಿ ಇಂಗ್ಲಿಷ್ 6ನೇ ತರಗತಿ ವಿಜ್ಞಾನ 6ನೇ ತರಗತಿ ಕನ್ನಡ 7ನೇ ತರಗತಿ ವಿಜ್ಞಾನ 7ನೇ ತರಗತಿ ಗಣಿತ.

About Author

Leave a Reply

Your email address will not be published. Required fields are marked *