ರಾಜ್ಯದಲ್ಲಿ ದಿನೇ ದಿನೇ ಹೆಚ್ಚುತ್ತಿದೆ ಚಳಿ, ಶೀತಗಾಳಿ
ಬೆಂಗಳೂರು,ಜ. 26-ರಾಜ್ಯದಲ್ಲಿ ದಿನೇ ದಿನೇ ಚಳಿ, ಶೀತಗಾಳಿ ಹೆಚ್ಚಾಗುತ್ತಿದೆ. ವಿಶೇಷವಾಗಿ ಉತ್ತರ ಕರ್ನಾಟಕದ ಜಿಲ್ಲೆಗಳಲ್ಲಿ ಚಳಿಯ ಪ್ರಮಾಣಕ್ಕೆ ಜನರು ಮನೆಯಿಂದ ಹೊರಬರದಂತಾಗಿದೆ.
ಜನವರಿ ತಿಂಗಳಾರಂಭದಲ್ಲಿ ಕಡಿಮೆಯಾಗಿದ್ದ ಚಳಿ ಇನ್ನೇನು ಕಡಿಮೆ ಆಯ್ತು ಅಂದುಕೊಳ್ಳುವಷ್ಟರಲ್ಲಿ ತಿಂಗಳಾಂತ್ಯದಲ್ಲಿ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ.
ಬೆಳಿಗ್ಗೆಯ ಮೈನಡುಗುವ ಚಳಿ, ಸಂಜೆಯ ಶೀತ ಗಾಳಿಗೆ ಜನರು ಹೈರಾಣಾಗಿದ್ದಾರೆ. ಇನ್ನು ಬದಲಾಗುತ್ತಿರುವ ಹವಾಮಾನದಿಂದಾಗಿ ಶೀತ ಸಂಬಂಧಿತ ಕಾಯಿಲೆಗಳಾದ ನೆಗಡಿ, ಜ್ವರ, ಕೆಮ್ಮು ಹೆಚ್ಚಾಗಿ ಕಾಣಿಸಿಕೊಳ್ಳುತ್ತಿದೆ.
ಬೆಂಗಳೂರು, ಚಿಕ್ಕಬಳ್ಳಾಪುರ, ಮಂಡ್ಯ, ರಾಮನಗರ ಮತ್ತು ಮೈಸೂರು ಭಾಗಗಳಲ್ಲಿ ಚಳಿಯ ಪ್ರಮಾಣ 15 ರಿಂದ 18 ಡಿಗ್ರಿ ಸೆಲ್ಸಿಯಸ್ ಇರಲಿದೆ. ಇನ್ನು ಕರಾವಳಿ ಜಿಲ್ಲೆಗಳಲ್ಲಿ ಗರಿಷ್ಠ 30 ರಿಂದ 32 ಡಿಗ್ರಿ ಸೆಲ್ಸಿಯಸ್ನಷ್ಟು ದಾಖಲಾಗುತ್ತಿದೆ.
ಉತ್ತರ ಕರ್ನಾಟಕದಲ್ಲಿ ಬೆಳಗ್ಗೆ ದಟ್ಟವಾದ ಮಂಜು ಮತ್ತು ಚಳಿ ಇದ್ದರೆ ಮಧ್ಯಾಹ್ನ ಆಗುತ್ತಿದ್ದಂತೆ ಸೂರ್ಯನ ಬಿಸಿಲು ಬೇಸಿಗೆ ಕಾಲದ ಅನುಭವವನ್ನು ನೀಡುತ್ತಿದೆ.
2021ರಲ್ಲಿ ಹೆಚ್ಚು ಅಕಾಲಿಕ ಮಳೆಯನ್ನು ಕಂಡಿದ್ದು, ಈ ವಾತಾವರಣದ ಏರಿಳಿತಕ್ಕೆ ಕಾರಣವಾಗಿದೆ.
ಜಿಲ್ಲಾವಾರು ಹವಾಮಾನ ವರದಿ:
ಬೆಂಗಳೂರು 27-18, ಮೈಸೂರು 29-18, ಚಾಮರಾಜನಗರ 29-19, ರಾಮನಗರ 29-19, ಮಂಡ್ಯ 30-19, ಬೆಂಗಳೂರು ಗ್ರಾಮಾಂತರ 27-18, ಚಿಕ್ಕಬಳ್ಳಾಪುರ 28-18, ಕೋಲಾರ 28-18, ಹಾಸನ 28-17, ಚಿಕ್ಕಮಗಳೂರು 28-15, ದಾವಣಗೆರೆ 31-18, ಶಿವಮೊಗ್ಗ 32-17, ಕೊಡಗು 27-14, ತುಮಕೂರು 29-18, ಉಡುಪಿ 30-22, ಮಂಗಳೂರು 30-22 ಡಿಗ್ರಿ ಸೆಲ್ಸಿಯಸ್ ಇರಲಿದೆ.
ಉತ್ತರ ಕನ್ನಡ 31-16, ಧಾರವಾಡ 29-16, ಹಾವೇರಿ 31-17, ಹುಬ್ಬಳ್ಳಿ 31-17, ಬೆಳಗಾವಿ 29-15, ಗದಗ 30-17, ಕೊಪ್ಪಳ 30-19, ವಿಜಯಪುರ 30-18, ಬಾಗಲಕೋಟ 31-18, ಕಲಬುರಗಿ 30-18, ಬೀದರ್ 27-14, ಯಾದಗಿರಿ 30-18, ರಾಯಚೂರ 30-19 ಮತ್ತು ಬಳ್ಳಾರಿ 30-20 ಡಿಗ್ರಿ ಸೆಲ್ಸಿಯಸ್ ಇರಲಿದೆ.