ದ್ವಿ ಚಕ್ರವಾಹನ –ಕಾರು ನಡುವೆ ಅಪಘಾತ: ಗಾಯಾಳುವನ್ನು ಆಸ್ಪತ್ರೆಗೆ ರವಾನಿಸಿದ ಎಂ.ಕೆ ಸೋಮಶೇಖರ್
ಮೈಸೂರು,ಜ.28-ಇತ್ತೀಚೆಗೆ ಕೆ.ಆರ್.ಕ್ಷೇತ್ರದ ಬಡಾವಣೆಯಲ್ಲಿ ಅಪಘಾತಗಳ ಹೆಚ್ಚಾಗುತ್ತಿದೆ. ಅದಕ್ಕೆ ಕಾರಣ ಹದಗೆಟ್ಟ ರಸ್ತೆಗಳು. ಇಂದು ಕುವೆಂಪುನಗರದ ನಿಮಿಷಾಂಭ ಬಡಾವಣೆಯ ವಿವೇಕಾನಂದ ವೃತ್ತಕ್ಕೆ ಸೇರುವ ರಸ್ತೆಯಲ್ಲಿ ಅಪಘಾತ ಸಂಭವಿಸಿದೆ.
ರಸ್ತೆಯಲ್ಲಿನ ಗುಂಡಿ ಇದ್ದ ಕಾರಣ ಪಕ್ಕಕ್ಕೆ ಸರಿಯಲು ಹೋಗಿ ದ್ವಿಚಕ್ರ ಹಾಗೂ ಕಾರಿನ ನಡುವೆ ಅಪಘಾತ ಸಂಭವಿಸಿದೆ. ದ್ವಿಚಕ್ರ ವಾಹನದ ಚಾಲಕನಿಗೆ ತೀವ್ರವಾಗಿ ಗಾಯವಾಗಿದೆ. ಈ ವೇಳೆ ಪಾದಯಾತ್ರೆ ಮುಗಿಸಿ ಬರುತ್ತಿದ್ದ ಮಾಜಿ ಶಾಸಕ ಎಂ.ಕೆ.ಸೋಮಶೇಖರ್ ಅವರು ಕೂಡಲೇ ಸ್ಥಳಕ್ಕೆ ಧಾವಿಸಿ ಗಾಯಾಳುವನ್ನು ಆಟೋ ಮೂಲಕ ಆಸ್ಪತ್ರೆಗೆ ಕಳುಹಿಸಿ ಮಾನವೀಯತೆ ಮೆರೆದರು.

ಹದಗೆಟ್ಟ ರಸ್ತೆಯಿಂದಾಗಿ ಈಗಾಗಲೇ ಮೂವರು ಪ್ರಾಣಕಳೆದುಕೊಂಡಿದ್ದಾರೆ. ಅಪಘಾತಗಳು ಸಂಭವಿಸುತ್ತಲೇ ಇದೆ. ಇನ್ನಾದರೂ ನಗರಪಾಲಿಕೆ, ಜಿಲ್ಲಾಡಳಿತ ಕೂಡಲೇ ಎಚ್ಚೆತ್ತುಕೊಂಡು ಗುಂಡಿಗಳನ್ನು ಮುಚ್ಚಿಸಿ ನಾಗರೀಕರಿಗೆ ಆಗುತ್ತಿರುವ ತೊಂದರೆ ತಪ್ಪಿಸುವಂತೆ ಆಗ್ರಹಿಸಿದ ಅವರು, ಕ್ಷೇತ್ರದ ಶಾಸಕರು ಕೆ.ಆರ್.ಕ್ಷೇತ್ರ ಮಾದರಿ ಕ್ಷೇತ್ರ, ಸುರಕ್ಷತೆಯ ರಸ್ತೆಯುಳ್ಳ ಕ್ಷೇತ್ರ ಎಂದು ಬರೀ ಹೇಳಿಕೆ ಪ್ರಚಾರಕಷ್ಟೆ ಸೀಮಿತಗೊಳಿಸಿದ್ದಾರೆ. ದಯವಿಟ್ಟು ಕೂಡಲೇ ಕ್ಷೇತ್ರದ ಎಲ್ಲಾ ರಸ್ತೆಗಳನ್ನು ಸರಿಪಡಿಸಿ ಅನಾಹುತಗಳು ಸಂಭವಿಸದಂತೆ ಕಾರ್ಯೋನ್ಮುಖರಾಗಿ ಕೆಲಸ ಮಾಡಲಿ ಹೇಳಿಕೆಗಳಿಗೆ ಅಭಿವೃದ್ಧಿ ಸೀಮಿತವಾಗದಿರಲಿ ಎಂದು ಕಿಡಿಕಾರಿದರು.