ಕುವೆಂಪುನಗರದ ಬಟ್ಟೆ ಮಳಿಗೆಯಲ್ಲಿ ಅಗ್ನಿ ಅವಘಡ: ಲಕ್ಷಾಂತರ ಮೌಲ್ಯದ ಬಟ್ಟೆ ಬೆಂಕಿಗೆ ಆಹುತಿ

ಮೈಸೂರು,ಫೆ.1-ಬಟ್ಟೆ ಮಳಿಗೆಯೊಂದರಲ್ಲಿ ಅಗ್ನಿ ಅವಘಡ ಸಂಭವಿಸಿ ಲಕ್ಷಾಂತರ ರೂ.ಮೌಲ್ಯದ ಬಟ್ಟೆಗಳು ಸುಟ್ಟು ಭಸ್ಮವಾಗಿರುವ ಘಟನೆ ಕುವೆಂಪುನಗರದ ಕಾಂಪ್ಲೆಕ್ಸ್ ಬಳಿ ನಡೆದಿದೆ.‌


ನೃಪತುಂಗ ರಸ್ತೆಯಲ್ಲಿರುವ ರಾಜ್ ಫ್ಯಾಷನ್ಸ್ ಮಳಿಗೆಯಲ್ಲಿ ವಿದ್ಯುತ್ ಶಾರ್ಟ್ ಸರ್ಕ್ಯೂಟ್ ನಿಂದ ಅಗ್ನಿ ಅವಘಡ ಸಂಭವಿಸಿದೆ.
ಇಂದು ಬೆಳಗಿನ ಜಾವ 5ಗಂಟೆಯ ಸುಮಾರಿಗೆ ಮಳಿಗೆಯಿಂದ ದಟ್ಟವಾಗಿ ಹೊಗೆ ಹೊರ ಹೋಗುತ್ತಿರುವುದನ್ನು ಕಂಡ ದಾರಿ ಹೋಕರು ಮಳಿಗೆಯ ಮಾಲೀಕರಿಗೆ ವಿಷಯ ತಿಳಿಸಿದ್ದಾರೆ.

ಕೂಡಲೇ ಮಾಲೀಕರು ಅಗ್ನಿ ಶಾಮಕ ಸಿಬ್ಬಂದಿಗಳಿಗೆ ಮಾಹಿತಿ ನೀಡಿದ್ದಾರೆ. ವಿಷಯ ತಿಳಿಯುತ್ತಿದ್ದಂತೆಯೇ ಸ್ಥಳಕ್ಕಾಗಮಿಸಿದ ಸರಸ್ವತಿಪುರಂ ಅಗ್ನಿಶಾಮಕ ಠಾಣೆಯ ಸಿಬ್ಬಂದಿಗಳು ಬೆಂಕಿಯನ್ನು ನಂದಿಸುವಲ್ಲಿ ಯಶಸ್ವಿಯಾದರೂ ಅಷ್ಟರಲ್ಲಾಗಲೇ ಲಕ್ಷಾಂತರ ರೂ.ಮೌಲ್ಯದ ಬಟ್ಟೆಗಳು ಅಗ್ನಿಗೆ ಆಹುತಿಯಾಗಿದ್ದವು. ಮಳಿಗೆಯಲ್ಲಿ ವಯಸ್ಕರ, ಮಕ್ಕಳ, ಮಹಿಳೆಯರ ಉಡುಪುಗಳ ಹೆಚ್ಚಿನ ಸಂಗ್ರಹವಿತ್ತು ಎನ್ನಲಾಗಿದೆ.

About Author

Leave a Reply

Your email address will not be published. Required fields are marked *