ಹಿಜಾಬ್ ಹಾಕಿಕೊಂಡು ಕಾಲೇಜಿಗೆ ಬರುವುದಾದರೆ ಮದರಾಸ್ ಗೆ ಹೋಗಿ: ಸಂಸದ ಪ್ರತಾಪ್ ಸಿಂಹ

1 min read

ಮೈಸೂರು,ಫೆ.5-ರಾಜ್ಯದಲ್ಲಿನ ಹಿಜಾಬ್ ವಿವಾದ ವಿಚಾರವಾಗಿ ಸಂಸದ ಪ್ರತಾಪ್ ಸಿಂಹ ಅವರು ಸುದ್ದಿಗಾರರೊಂದಿಗೆ ಮಾತನಾಡಿದ್ದಾರೆ.


ಎಲ್ಲರು ಕಾಲೇಜಿಗೆ ಜಾಬ್ ಗಾಗಿ ಬರುತ್ತಾರೆ ನೀವು ಹಿಜಾಬ್ ಗಾಗಿ ಬರುತ್ತೀದ್ದೀರಾ? ಹಿಜಾಬ್ ಹಾಕಿಕೊಂಡು, ಟೋಪಿ ಹಾಕಿಕೊಂಡು ನೀವು ಕಲಿಯಬೇಕು ಎಂಬುದಾದರೆ ಮದರಾಸ್ ಗೆ ಹೋಗಿ.‌ ಮದರಾಸ್ ನಲ್ಲಿ ನಿಮ್ಮ ಪ್ರತ್ಯೇಕ ಭಾವನೆ ಕಾಪಾಡಿಕೊಳ್ಳಬಹುದು. ಸರ್ಕಾರಿ ಶಾಲೆಗಳಲ್ಲಿ ಈ ಪ್ರತ್ಯೇಕತೆ ಸಾಧ್ಯವಿಲ್ಲ ಎಂದಿದ್ದಾರೆ.


ಹಿಜಾಬ್ ಗಾಗಿ ವಿದ್ಯಾರ್ಥಿಗಳು ಯಾಕೆ ಇಷ್ಟು ಹಠ ಹಿಡಿದು
ಕೂತಿದ್ದಾರೆ? ಸಮವಸ್ತ್ರ ಎನ್ನುವುದು ಬರೀ ಬಣ್ಣದ ಉಡುಪಲ್ಲ. ಅದು ಎಲ್ಲಾ ಮಕ್ಕಳು ಸಮಾನರು ಎಂದು ಸಾರುವ ಉಡುಪು ಎಂದ ಅವರು, ಎಲ್ಲಾ ರೀತಿಯ ಒತ್ತಡ, ಟೀಕಾಪ್ರಹಾರದ ನಡುವೆಯೂ ಸಮವಸ್ತ್ರ ಕಡ್ಡಾಯಕ್ಕೆ ಸರ್ಕಾರ ಬದ್ಧವಾಗಿರೋದು ಒಳ್ಳೆಯ ಸಂದೇಶ ಎಂದು ಹೇಳಿದರು.


ಇದು ಬ್ರಿಟಿಷರ ಭಾರತವಲ್ಲ. ಇದು ಭರತ ಖಂಡ. ಹಿಂದೂ ಧರ್ಮದ ಬುನಾದಿ ಮೇಲೆ ಇರುವ ದೇಶವಿದು. ಇಲ್ಲಿ ಗಣಪತಿ ಪೂಜೆ, ಹೆಣ್ಣು ಮಕ್ಕಳ ಕುಂಕುಮ‌ ಸಂಸ್ಕೃತಿಯ ಭಾಗ. ಇದನ್ನು ಯಾರು ಪ್ರಶ್ನಿಸುವಂತಿಲ್ಲ. ಇಸ್ಲಾಂ, ಕ್ರಿಶ್ಚಿಯನ್ ನವರು ಮರುಭೂಮಿಯಲ್ಲಿ ಹುಟ್ಟಿ ನೆಲೆಗಾಗಿ ಹುಡುಕಿಕೊಂಡು ಇಲ್ಲಿಗೆ ಬಂದಿವೆ. ಇಲ್ಲಿಗೆ ಬಂದ ಮೇಲೆ ಹಿಂದೂ ಸಂಸ್ಕೃತಿಯನ್ನು ಒಪ್ಪಿಕೊಳ್ಳಬೇಕು. ಕ್ರಿಶ್ಚಿಯನ್, ಇಸ್ಲಾಂ ಧರ್ಮದ ಏರಿಕೆ ಇಲ್ಲಿ ನಡೆಯುವುದಿಲ್ಲ. ಈ ನೆಲದ ಸಂಸ್ಕೃತಿಯನ್ನು ಎಲ್ಲ ಧರ್ಮದವರು ಒಪ್ಪಿಕೊಳ್ಳಬೇಕು ಎಂದರು.


ಅಧಿಕಾರಕ್ಕಾಗಿ ಸಿದ್ದರಹೀಮ್ ಅಯ್ಯ ಎಂದು ಹೆಸರು ಬದಕಿಸಿಕೊಳ್ಳುತ್ತಾರೆ:


ಹಿಜಾಬ್ ಬಗ್ಗೆ ಸಿದ್ದರಾಮಯ್ಯ ಹೇಳಿಕೆಗೆ ಪ್ರತಿಕ್ರಿಯಿಸಿರುವ ಅವರು, ಸಿದ್ದರಾಮಯ್ಯ ಅವರನ್ನು ಗಂಭೀರವಾಗಿ ಪರಿಗಣಿಸಬೇಡಿ. ಗೋರಿಪಾಳ್ಯದ ಜಮೀರ್ ಅಹಮದ್ ಈಗ ಸಿದ್ದರಾಮಯ್ಯ ಅವರನ್ನು ಚಾಮರಾಜ ಪೇಟೆಯಲ್ಲಿ ಚುನಾವಣೆ ಗೆ ಸ್ಪರ್ಧಿಸಲು ಕರೆಯುತ್ತಿದ್ದಾರೆ. ಅಧಿಕಾರಕ್ಕಾಗಿ ಸಿದ್ದರಾಮಯ್ಯ ಅವರು
ಸಿದ್ದರಹೀಮ್ ಅಯ್ಯ ಅಂತಾ ಬೇಕಾದರೆ ಹೆಸರು ಬದಲಾಯಿಸಿ ಕೊಳ್ಳುತ್ತಾರೆ ಎಂದು ಲೇವಡಿ ಮಾಡಿದ್ದಾರೆ.

About Author

Leave a Reply

Your email address will not be published. Required fields are marked *