ವಾರಸುದಾರರಿಲ್ಲದೆ 91 ವಾಹನಗಳ ವಿಲೇವಾರಿಗೆ ಫೆ.14 ರವರೆಗೆ ಅವಕಾಶ
1 min read
ಮೈಸೂರು,ಫೆ.10-ನಗರ ವ್ಯಾಪ್ತಿಯಲ್ಲಿ ವಾರಸುದಾರರು ಹಾಗೂ ವಿಲೇವಾರಿಯಾಗದೆ ಇರುವ 91 ದ್ವಿಚಕ್ರ ವಾಹನಗಳನ್ನು ಗುರುತಿಸಲಾಗಿದೆ. ಇದನ್ನು ನಿಯಮಾನುಸಾರ ವಿಲೇವಾರಿ ಮಾಡಲು ಪೊಲೀಸ್ ಇಲಾಖೆ ಮುಂದಾಗಿದೆ.
91 ವಾಹನಗಳನ್ನು ನಗರದ ರೇಸ್ ಕೋರ್ಸ್ ಹಿಂಭಾಗವಿರುವ ಸಿ.ಎ.ಆರ್. ಆವರಣದಲ್ಲಿ ಇಡಲಾಗಿದೆ. ಸದರಿ ವಾಹನಗಳ ವಾರಸುದಾರರ ಪತ್ತೆ ಸಂಬಂಧ ಸಾರ್ವಜನಿಕರು ಸಿಎಆರ್ ಆವರಣಕ್ಕೆ ಭೇಟಿ ನೀಡಿ ವಾಹನಗಳನ್ನು ಪರಿಶೀಲಿಸಲು ಅಂತಿಮ ಅವಕಾಶ ನೀಡಲಾಗಿದೆ.
ಸಾರ್ವಜನಿಕರು ಸಿಎಆರ್ ಆವರಣಕ್ಕೆ ಭೇಟಿ ನೀಡಿ ವಾಹನ ಪರಿಶೀಲನೆ ಸಮಯದಲ್ಲಿ ಯಾವುದೇ ವಾಹನಗಳು ತಮ್ಮದೆಂದು ಕಂಡು ಬಂದಲ್ಲಿ ದಾಖಲಾತಿಗಳೊಂದಿಗೆ ಮಾಹಿತಿಯನ್ನು ಪೊಲೀಸ್ ಆಯುಕ್ತರ ಕಚೇರಿಯ ಸಿಸಿಆರ್ ಬಿ ಘಟಕದ ಪೊಲೀಸರಿಗೆ ನಿರೀಕ್ಷಕರಿಗೆ ಅಥವಾ ಸ್ಥಿರ ದೂರವಾಣಿ ಸಂಖ್ಯೆ 0821-2418335 / ಮೊಬೈಲ್ ಸಂಖ್ಯೆ 9480802253 ಗೆ ಮಾಹಿತಿ ನೀಡಲು ಸೂಚಿಸಿದೆ.
ಫೆ.14 ರವರೆಗೆ ಈ ಅವಕಾಶವಿದ್ದು, ವಾಹನಗಳ ವಾರಸುದಾರರು ಯಾರು ಬಾರದಿದ್ದಲ್ಲಿ ಕರ್ನಾಟಕ ಪಾರದರ್ಶಕ ಸಾರ್ವಜನಿಕ ಸಂಗ್ರಹಣೆ ಕಾಯ್ದೆಯ (ಕೆಟಿಪಿಪಿ ಆ್ಯಕ್ಟ್) ರೀತ್ಯಾ ನಿಯಮಾನುಸಾರ ವಿಲೇವಾರಿ ಮಾಡಲಾಗುವುದು.