ಅಂಬಾರಿ ಡಬಲ್ ಡೆಕ್ಕರ್ ಬಸ್ ಸ್ಥಳಾಂತರ!
1 min read
ಮೈಸೂರು,ಫೆ.16-ಅಂಬಾರಿ ಡಬಲ್ ಡೆಕ್ಕರ್ ಬಸ್ ಗಳು ಸ್ಥಳಾಂತರಗೊಂಡಿವೆ!
ಹೌದು ಡಬಲ್ ಡೆಕ್ಕರ್ ಬಸ್ ಗಳು ಬಸ್ ಗಳನ್ನು ಜೆ ಎಲ್ ಬಿ ರಸ್ತೆಯ ಮಯೂರ ಹೋಟೆಲ್ ಆವರಣದಿಂದ ಮೈಸೂರು ಅರಮನೆಯ ದಕ್ಷಿಣ ದ್ವಾರಕ್ಕೆ ಸ್ಥಳಾಂತರಿಸಲಾಗಿದೆ.
ಡಬಲ್ ಡೆಕ್ಕರ್ ಬಸ್ ನಲ್ಲಿ ಸಂಚರಿಸಲು ಪ್ರವಾಸಿಗರು ಮತ್ತು ಸಾರ್ವಜನಿಕರಿಂದ ನೀರಸ ಪ್ರತಿಕ್ರಿಯೆ ವ್ಯಕ್ತವಾಗುತ್ತಿರುವ ಹಿನ್ನೆಲೆಯಲ್ಲಿ ಬಸ್ ಸ್ಥಳಾಂತರ ಮಾಡಲಾಗಿದೆ. ಇನ್ನು ಮುಂದೆ ಡಬಲ್ ಡೆಕ್ಕರ್ ಬಸ್ ಗಳು ಅರಮನೆಯ ದಕ್ಷಿಣ ದ್ವಾರದಿಂದ ಕಾರ್ಯಾಚರಿಸಲಿದೆ.
ದರದಲ್ಲಿ ಇಳಿಕೆ:
ಅಂಬಾರಿ ಡಬಲ್ ಡೆಕ್ಕರ್ ಬಸ್ ಗಳನ್ನು ಸ್ಥಳಾಂತರಿಸಿರುವುದಲ್ಲದೆ, ವಿಹಾರ ದರವನ್ನು ಇಳಿಸಲಾಗಿದೆ. ದರವನ್ನು 250 ರಿಂದ 150 ರೂಪಾಯಿಗೆ ಇಳಿಸಲಾಗಿದೆ. ಪ್ರವಾಸಿಗರನ್ನು ಸೆಳೆಯುವ ಸಲುವಾಗಿ ಕರ್ನಾಟಕ ರಾಜ್ಯ ಪ್ರವಾಸೋದ್ಯಮ ಅಭಿವೃದ್ಧಿ ನಿಗಮ ಈ ಮಹತ್ವದ ನಿರ್ಧಾರ ಕೈಗೊಂಡಿದೆ.